ಶಹಾಪುರ : ಸಗರ ನಾಡಿನ ಹೆಮ್ಮೆಯ ಹಿರಿಯ ಸಾಹಿತಿ, ಸೌಮ್ಯ ಸ್ವಭಾವದ ಬರಹಗಾರರ ಸುರಪುರದ ಎ.ಕೃಷ್ಣ ಅವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.
ಎ.ಕೃಷ್ಣ ಅವರು ತಮ್ಮ ಮೊನಚಾದ ಬರಹಗಳ ಮೂಲಕ ಎಲ್ಲರ ಮನೆ ಮಾತಾಗಿ ಹೈದರಾಬಾದ್ ಕರ್ನಾಟಕದ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಂತಹ ಕೆಲಸ ಸಾಕಷ್ಟು ಮಾಡಿದ್ದಾರೆ,ಅಲ್ಲದೇ ಇವರ ಮಾರ್ಗದರ್ಶನದಲ್ಲಿ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನಾತ್ಮಕವಾಗಿ ಕೆಲಸವೂ ಮಾಡಿ ಯುವ ಬರಹಗಾರರಿಗೆ ಮಾದರಿಯಾಗಿದ್ದಾರೆ.
ಸೌಮ್ಯ ಸ್ವಭಾವದ ಇವರು ಎಲ್ಲರೊಂದಿಗೂ ನಗುವಿನೊಂದಿಗೆ ಮಾತನಾಡಿಸಿ ಖುಷಿ ಪಡುವಂತೆ ಮಗುವಿನ ಮುಗ್ಧ ಮನಸ್ಸು ಇವರದಾಗಿತ್ತು, ಅಲ್ಲದೆ ಅಪಾರ ಶಿಷ್ಯಂದಿರ ಬಳಗವನ್ನೇ ಇವರು ಹೊಂದಿದ್ದಾರೆ ಇವರ ಅಗಲಿಕೆಯಿಂದ ಸಾಹಿತ್ಯ ಲೋಕಕೆ ಬರಸಿಡಿಲು ಬಡಿದಂತಾಗಿದೆ ಎಂದು ಕಂಬನಿ ಮಿಡಿದರು.
ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್,ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ,ಶರಣ ಸಾಹಿತಿ ಶಿವಣ್ಣ ಇಜೇರಿ,ತಾಲ್ಲೂಕು ಕನ್ನಡ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ,ಕನ್ನಡ ಪಂಡಿತರು ಹಾಗೂ ಜಾನಪದ ವಿದ್ವಾಂಸರಾದ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ ದೊಡ್ಡ ಬಸಪ್ಪ ಬಳೂರಗಿ.ಡಾ:ಮೊನಪ್ಪ ಶಿರವಾಳ,ಗೌರವ ಕಾರ್ಯದರ್ಶಿಗಳಾದ ಪಂಚಾಕ್ಷ ರಯ್ಯ ಹಿರೇಮಠ ಬಸವರಾಜ ಸಿನ್ನೂರು ಹಾಗೂ ಇತರರು ಕಂಬನಿ ಮಿಡಿದಿದ್ದಾರೆ.