ಸುರಪುರ: ಮುಂಬೈನ ದಾದರನಲ್ಲಿರುವ ಬಾಬಾ ಸಾಹೇಬ್ ಡಾ: ಬಿ.ಆರ್.ಅಂಬೇಡ್ಕರ್ ಅವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ಧ್ವಂಸಗೊಳಿಸಿದ ಗೂಂಡಾಗಳನ್ನು ಬಂಧಿಸುವಂತೆ ಮಾದಿಗ ದಂಡೋರ ಸಂಘಟನೆ ತಾಲೂಕು ಅಧ್ಯಕ್ಷ ದುರ್ಗಪ್ಪ ಎಸ್.ಬಡಿಗೇರ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಅಂಬೇಡ್ಕರರ ಮನೆಯ ಮೇಲೆ ದಾಳಿ ಮಾಡಿ ದೇಶದ ಕೋಟ್ಯಾಂತರ ಜನ ಅಂಬೇಡ್ಕರರ ಅಭಿಮಾನಿಗಳಿಗೆ ನೋವುಂಟಾಗಿದೆ.ಕೂಡಲೆ ದಾಳಿ ಮಾಡಿದವರನ್ನು ಬಂಧಿಸಬೇಕು ಮತ್ತು ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸುವ ಜೊತೆಗೆ ಅಂಬೇಡ್ಕರರ ಮನೆಗೆ ಸೂಕ್ತ ಭದ್ರತೆ ವದಗಿಸಬೇಕೆಂದು ಆಗ್ರಹಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮ ಕಟ್ಟಿಮನಿ,ದುರ್ಗಪ್ಪ ಗೋಗಿಕೆರಾ,ಭೀಮಣ್ಣ ರುಕ್ಮಾಪುರ,ಸುರೇಶ ಕಟ್ಟಿಮನಿ,ಯಮನಪ್ಪ ಕಟ್ಟಿಮನಿ,ಭೀಮಣ್ಣ ಕಟ್ಟಿಮನಿ,ರಾಖೇಶ ಬಸವರಾಜ,ಭೀಮರಾಯ ಗೋಗಿಕೆರಾ,ತಾಯಪ್ಪ ಶೆಳ್ಳಿಗಿ,ಹಣಮಂತ ಗೋಗಿಕೆರಾ ಸೇರಿದಂತೆ ಅನೇಕರಿದ್ದರು.