ವಿವಿಧ ಬೇಡಿಕರಗಳನ್ನು ಈಡೇರಿಸುವಂತೆ ಅಂಗನವಾಡಿ ನೌಕರರ ಆಗ್ರಹ

0
46

ಸುರಪುರ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮಾತನಾಡಿ,ಅಂಗನವಾಡಿ ನೌಕರರು ಕೊರೊನಾ ಸೈನಿಕರಾಗಿ ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಸೊಂಕಿನ ಕುರಿತು ಜಾಗೃತಿ ಮತ್ತು ಸರ್ಕಾರದ ಆದೇಶದಂತೆ ಬೇರೆ ರಾಜ್ಯಗಳಿಂದ ಬಂದ ಜನರ ಮಾಹಿತಿಯನ್ನು ನೀಡುತ್ತಿದ್ದಾರೆ ಹಾಗೂ ಈ ಸೊಂಕು ಕೂಡಾ ಸಮುದಾಯಕ್ಕೆ ಹರಡಿರುವುದರಿಂದ ನೌಕರರಿಕಗೆ ಮಾಸ್ಕ್ ಸ್ಯಾನಿಟೈಜರ್ ಸೇರಿದಂತೆ ಅಗತ್ಯ ವಸ್ತುಗಳು ನೀಡಬೇಕೆಂದರು.

Contact Your\'s Advertisement; 9902492681

ಕೊರನಾ ಸೇವಾ ಕಾರ್ಯಕ್ಕಾಗಿ ೨೫೦೦೦ ಪ್ರೋತ್ಸಾಹವನ್ನು ನೀಡಬೇಕು, ಮೇಲ್ವಿಚಾರಕಿಯರ ಹುದ್ದೆಗಳು ಶೇಕಡ ೧೦೦ ರಷ್ಟು ಈಗಿರುವ ಕಾರ್ಯಕರ್ತೆಯರನ್ನು ಮುಂಬಡ್ತಿಗೊಳಿಸಿ ಮೀಸಲು ನೀಡಬೇಕು, ಅಂಗನವಾಡಿ ಕಾರ್ಯಕರ್ತರಿಗೆ ೨೧ ಸಾವಿರ ವೇತನ ನಿಗದಿ ಮಾಡಬೇಕು, ಪ್ರತಿ ತಿಂಗಳ ಮೊಟ್ಟೆ ಬಿಲಮುಂಗಡವಾಗಿ ನೀಡಬೇಕು. ಆದಾಯ ತೆರಿಗೆ ಕಟ್ಟಲು ಸಾಮರ್ಥ್ಯವಿಲ್ಲದ ಕುಟುಂಬಗಳಿಗೆ ೭ ಸಾವಿರದ ೫ ನೂರು ರೂಪಾಯಿ ಸಹಾಯಧನ ನೀಡಬೇಕು. ಅಂಗನವಾಡಿ ನೌಕರರ ಮೇಲೆ ಹಲ್ಲೆಗಳು ನಡೆಯದಂತೆ ಎಚ್ಚರ ವಹಿಸಿ ಹಾಗೂ ಜನವಿರೋಧಿ ವಿದ್ಯುತ್ ಕಾಯ್ದೆ ಭೂ ಕಾಯ್ದೆ ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಸಮ್ಮ ಆಲಾಳ, ರಾದಾ ಲಕ್ಷ್ಮೀಪುರ, ನಸೀಮಾ ಮುದ್ನೂರ, ಜಯಶ್ರೀ, ಶಕುಂತಲಾ, ಚಂದ್ರಕಲಾ, ಸಂಗೀತಾ, ಜಗದೇವಿ, ಬಸಮ್ಮ, ಉಮಾ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here