ಸುರಪುರ: ೨೦೧೯-೨೦ನೇ ಸಾಲಿನ ಪಿ.ಯು.ಸಿ. ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಶ್ರೀಮತಿ ಎನ್.ಎನ್.ಶೆಟ್ಟಿ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ಶೇ೯೮ ರಷ್ಟು ಫಲಿತಾಂಶ ಬಂದಿದ್ದು ೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೭ ಪ್ರಥಮ ದರ್ಜೆ ಹಾಗೂ ೧೯ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಈ ಕಾಲೇಜಿನ ವಿದ್ಯಾರ್ಥಿನಿಯಾದ ಪ್ರತೀಕ್ಷಾ ಹಣಮಂತರಾಯ ಶೇ೯೩.೫ ರಷ್ಟು ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ, ಕಾಲೇಜಿನ ವಿದ್ಯಾರ್ಥಿಗಳಾದ ಕು.ಮುಸ್ಕಾನ್ ಶೇ೯೦.೧, ರೇಖಾ ಆಲ್ದಾಳ ಶೇ೯೦, ಶ್ರೀಕಾಂತ ಶೇ೮೮.೩, ಐಶ್ವರ್ಯ ಶೇ೮೭.೮, ಗಾಯತ್ರಿ ಜೋಷಿ ಶೇ೮೭, ಆಯೇಷಾ ಸಿದ್ದಿಕ ಶೇಶೇ೮೬.೩ ಹಾಗೂ ಪ್ರಿಯಾಂಕ ಗೋಪಣ್ಣ ಯಾದವ್ ಶೇ೮೬ ರಷ್ಟು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬೂದೆಪ್ಪ ಶೆಟ್ಟಿ, ಕಾರ್ಯದರ್ಶಿ ತಿರುಪತಿ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಬಿ.ಶೆಟ್ಟಿ ಹಾಗೂ ಎಲ್ಲಾ ಉಪನ್ಯಾಸಕ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.