ರಾಯಚೂರು: ಕೊರೊನಾ ನೆಪವೊಡ್ಡಿ ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕ ಭಾಗ ಸೇರಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಗಳ 2020-21 ಸಾಲಿನ ಭರ್ತಿಗೆ ತಡೆ ಹಿಡಿದಿರುವುದು ಇದು ಸಂವಿಧಾನ ದ್ರೋಹಿ ಕೆಲಸ ಈ ಆದೇಶವನ್ನು ಕೂಡಲೇ ಸರ್ಕಾರ ವಾಪಸು ಪಡೆಯಬೇಕು ಎಂದು SFI ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ ಜಾಲಹಳ್ಳಿ ಯ ಶ್ರಮಿಕರ ಭವನದಲ್ಲಿ SFI ವಲಯ ಸಮಿತಿ ವತಿಯಿಂದ ಕರೆದ ಸುದ್ದಿ ಘೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ವಿವಿಧ ಇಲಾಖೆಗಳಲ್ಲಿ ಸುಮಾರು ಎರಡು ಲಕ್ಷದ 59 ಸಾವಿರಕ್ಕೂ ಅಧಿಕ ಉದ್ಯೋಗ ಗಳು ಖಾಲಿ ಇವೆ. ಮತ್ತೊಂದು ಕಡೆ ವಿದ್ಯಾವಂತ ನಿರುದ್ಯೋಗ ಸಮೂಹ ದೊಡ್ಡದಿದೆ ಈಗ ಮುಂದುವರಿದು ಸರ್ಕಾರ ಕೊರೋನಾ ವಿಚಾರ ವನ್ನು ಮುಂದಿಟ್ಟುಕೊಂಡು ಆರ್ಥಿಕ ನೆಪವೊಡ್ಡಿ ನೇಮಕಾತಿಗೆ ತಡೆ ಹಾಕಿ ಆದೇಶ ಹೊರಡಿರುಸುವುದು ಗಾಯದ ಮೇಲೆ ಬರೆ ಎಳದಂತೆ ಆಗಿದೆ. ಹಿತ ಕಾಯಬೇಕಾದ ಸರ್ಕಾರ ಇವತ್ತು ನಿರುದ್ಯೋಗದ ಬಲವರ್ಧನೆಗೆ ಹೆಜ್ಜೆ ಹಾಕುತ್ತಿದೆ.
ಅಲ್ಲದೆ ಅನೇಕ ವರ್ಷಗಳ ಹೋರಾಟದ ಪ್ರತಿಫಲವಾಗಿ ಈ ಭಾಗಕ್ಕೆ 371(ಜೆ)ಯ ಅಡಿಯಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಉದ್ಯೋಗ ಮತ್ತು ಸ್ಥಳೀಯರಿಗೆ ಮೀಸಲಾತಿ ಸಿಕ್ಕಿದೆ. ಈ ಮೀಸಲಾತಿಯನ್ನು ಆರಂಭದಿಂದಲೂ ಸರ್ಕಾರ ನಿಗದಿತ ಪ್ರಮಾಣದಲ್ಲಿ ಜಾರಿ ಮಾಡಲು ಯಾವ ಆಸಕ್ತಿಯನ್ನು ತೋರುತ್ತಿಲ್ಲ, ಕೂಡಲೇ ಆ ಆದೇಶ ವಾಪಸ್ ಪಡೆದು, ಕಲ್ಯಾಣ ಕರ್ನಾಟಕ ಪ್ರದೇಶದ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಹಿಡಿತದಿಂದ ಹೊರಗಿಡಬೇಕು ಹಾಗೂ ನೇಮಕಾತಿ ಪ್ರಕ್ರಿಯೆಗೆ ಮುಂದಾಗಬೇಕು ನಿರ್ಲಕ್ಷ್ಯ ವಹಿಸಿದರೆ ಕಲ್ಯಾಣ ಕರ್ನಾಟಕ ಭಾಗದಿಂದಲೇ ಇಡೀ ರಾಜ್ಯವ್ಯಾಪಿ ಶಾಸಕರ, ಸಚಿವರು ಸೇರಿ ಎಲ್ಲ ಜನಪ್ರತಿನಿಧಿಗಳ ಮನೆ, ಕಾರ್ಯಾಲಯದ ಮುಂಭಾಗದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಹೇಳಿದರು.
ಕೊರೊನಾ ಹರಡುವಿಕೆ ಈ ಘಳಿಗೆಯಲ್ಲಿ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಹಿತ ಕಾಪಾಡಬೇಕು, ಶುಲ್ಕ, ಆನ್ಲೈನ್ ತರಗತಿ ವಿಚಾರದಲ್ಲಿ ಸರ್ಕಾರ ಯಾವ ಸ್ಪಷ್ಟವಾದ ನಿರ್ಧರಕ್ಕೂ ಮುಂದಾಗದೆ, ಖಾಸಿಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಹಾಗೂ ದಲಿತ, ಹಿಂದಳಿದ, ಅಲ್ಪಸಂಖ್ಯಾತ ಮತ್ತು ಬಡ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಂಚಿಸುವ ಹುನ್ನಾರ ನಡೆದಿದೆ ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈ ಬಿಡಬೇಕು. ಮತ್ತು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ನಿಧಿಯನ್ನು ನೀಡಬೇಕೆಂದು ಆಗ್ರಹಿಸಿದರು.
ನಂತರ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ರಾಜ್ಯ ಸಹ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಮಾತನಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಮೇಶ ವೀರಾಪೂರು, ಕಾರ್ಯದರ್ಶಿ ಲಿಂಗರಾಜ ಕಂದಗಲ್, ತಾಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ವಲಯ ಅಧ್ಯಕ್ಷರಾದ ಅಮರೇಶ ನಾಯಕ ಸೇರಿ ಇತರರಿದ್ದರು.