ಮಾಶಾಳ ಗ್ರಾಮದ ಗೋಕಟ್ಟಾ ಕೆರೆಗೆ ಭಾಗಿನ ಅಪ೯ಣೆ

0
73

ಕಲಬುರಗಿ: ಅಫಜಲಪೂರ ತಾಲೂಕಿನ ಮಾಶಾಳ ಗ್ರಾಮದ ರಾಮನಗರ (ಗೋಕಟ್ಟಾ,) ಕೆರೆಗೆ ಜೆ ಎಂ ಕೋರಬು ಮತ್ತು ಅವರ ಪೌಂಡೇಶನ್ ಹಾಗೂ ಗ್ರಾಮದ ಸಮಸ್ತ ಜನತೆ ಸೇರಿಕೋಂಡು ಕೇಧಾರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೆರೆಗೆ ಭಾಗಿನ ಅಪ೯ಣೆ ಮಾಡಿದರು.

ಜೆ.ಎಂ. ಕೊರಬು ಮಾಶಾಳ ಗ್ರಾಮದ ಈ ಕೆರೆಯನ್ನ ಶ್ರೀ ಕೇಧಾರ ಶ್ರೀಗಳು ನೂತನವಾಗಿ ನಾಮಕರಣ ಮಾಡಿ ಶ್ರೀರಾಮ ಕೆರೆ ಎಂದು ಘೋಷಿಸಿದರು.

Contact Your\'s Advertisement; 9902492681

ಈ ಕೆರೆ ನಿಮಾ೯ಣ ಮಾಡಲು ಹಾಲಿ ಮಾಜಿ ಶಾಸಕರು,ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಧಮ೯ಸ್ಥಳ ಸಂಘದವರಿಂದ ಸುಮಾರು 35 ರಿಂದ 40 ಲಕ್ಷ ರೂಪಾಯಿ ಅನುದಾನದಲ್ಲಿ ಕೆರೆ ನಿಮಾ೯ವಾಗಿದೆ ಎಂದು ತಿಳಿಸಿದರು.

ಸುಮಾರು ವಷ೯ದಿಂದ ಖಾಲಿಯಾಗಿದ್ದ ಈ ಕೆರೆ ಮುಂಗಾರು ಹಂಗಾಮಿನ ದಾರಾಕಾರ ಸುರಿದ ಮಳೆಯಿಂದ ಸಂಪೂರ್ಣವಾಗಿ ತುಂಬಿದ್ದು, ಮಾಶಾಳ ಗ್ರಾಮದ ಜನತೆಯ ನೀರಿನ ಬವಣೆ ತಪ್ಪಿದಂತಾಗಿದೆ. ಕೆರೆಗೆ ಬಹಳ ವರ್ಷಗಳ ನಂತರ ನೀರು ಬಂದಿದ್ದರಿಂದ ಗ್ರಾಮದಲ್ಲಿರುವ ಎಲ್ಲಾ ಕೊಳವೆ ಬಾವಿ,ತೆರೆದ ಬಾವಿಗಳ ಅಂತರಜಲ ಮಟ್ಟ ಹೆಚ್ಚಾಗಿ ಗ್ರಾಮದ ಜನತೆಗೆ ನೀರಿನ ಭವಣೆ ನೀಗಿಸಿದಂತಾಗಿದೆ. ಕೆರೆಗೆ ನೀರು ಬಂದ ಹಿನ್ನಲೆ ಗ್ರಾಮಸ್ಥರು ಬಹಳ ಸಂತೋಷ ಭರಿತವಾಗಿ ಹರ್ಷವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಕೇದಾರ ಶ್ರೀ ಸಾನಿಧ್ಯ ವಹಿಸಿದರು. ಫೌಂಡೇಷನ್ ಸಂಸ್ಥಾಪಕ,ಸಮಾಜ ಸೇವಕ ಜೆ.ಎಂ.ಕೊರಬು ಧರ್ಮ ಪತ್ನಿ ಗೀತಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ತಾಲೂಕಾ ಯೋಜಾನಾಧಿಕಾರಿ ನವೀನ ಎಂ. ಜೆ.ಎಂ.ಕೊರಬು ಫೌಂಡೇಷನ್ ಅಧ್ಯಕ್ಷ ಶಿವುಪುತ್ರ ಜಿಡ್ಡಗಿ, ಪಂಡಿತ ನಾವಿ, ಸುರೃಕಾಂತ ರ್ಯಾಕಾ, ಮಕ್ಬೂಲ್ ನಿಗೇವಾನ್, ಬಸವರಾಜ ಇಂಚೂರ, ಚಂದ್ರಾಮ ಹಾವಳಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here