ಶಹಾಬಾದ: ಕೊರೋನ ಮಹಾಮಾರಿಯ ಸೋಂಕು ಏರುಗತಿಯಲ್ಲಿರುವಾಗ ಪರೀಕ್ಷೆ ನಡೆಸಬೇಡಿ!’ ‘ಅಪ್ರಜಾತಾಂತ್ರಿಕವಾದ, ಏಕರೂಪವಲ್ಲದ, ತಾರತಮ್ಯವಾದ ಆನಲೈನ್ ಶಿಕ್ಷಣ ಅಥವಾ ಆನಲೈನ್ ಪರೀಕ್ಷೆ ನಮಗೆ ಬೇಡ!’ ಎಂಬ ಫಲಕಗಳೊಂದಿಗೆ ವಿದ್ಯಾರ್ಥಿಗಳು ಯುಜಿಸಿ ಹಾಗು ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರವನ್ನು ಖಂಡಿಸಿ ಎಐಡಿಎಸ್ಓ ಸಮಿತಿಯಿಂದ ಶುಕ್ರವಾರ ಆನಲೈನ್ ಚಳುವಳಿ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸತತ ನಾಲ್ಕು ತಿಂಗಳ ಲಾಕಡೌನನಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಅತ್ಯಂತಯಾತನಾಮಯವಾಗುತ್ತಿರುವುದನ್ನುಇಡೀದೇಶವೇ ನೋಡುತ್ತಿದೆ ಮತ್ತು ಅನುಭವಿಸುತ್ತಿದೆ.ರಾಜ್ಯ ಸರಕಾರವು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಹಾಗು ಇಂಜಿನಿಯರಿಂಗ್ ವಿದ್ಯಾರ್ಥಿಗಳಿ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಅಂತೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇದೆ ತಿಂಗಳ ಕೊನೆಯಲ್ಲಿ ಸಿ ಇ ಟಿ ಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ನಡೆ ಇಡೀ ರಾಜ್ಯದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಹಾಗು ಇಂಜಿನಿಯರಿಂಗ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನ ಮಹಾಮಾರಿಯಸೋಂಕು ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಪರೀಕ್ಷೆಯನ್ನು ನಡೆಸಬೇಡಿ ಎಂದು ಮನವಿ ಮಾಡಿದಲ್ಲದೇ, ಇತರ ಬೇಡಿಕೆಗಳಾದ ಏಕರೂಪವಾದ, ತಾರತಮ್ಯವಿಲ್ಲದ, ಮತ್ತು ಉತ್ತಮಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಒಂದು ವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಿದ್ಧಪಡಿಸಿ. ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಿ.ಎಲ್ಲ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಿ. ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸಿ, ಪಡೆದಿದ್ದಲ್ಲಿ ಹಿಂದಿರುಗಿಸಿ ಹಾಗೂ ಕರ್ನಾಟಕ ಇಟಿ ಪರೀಕ್ಷೆಯನ್ನುಮುಂದೂಡಿ ಎಂದು ಒತ್ತಾಯಿಸಿದರು.
ಎಐಡಿಎಸ್ಓ ಅಧ್ಯಕ್ಷ ತುಳಜರಾಮೆನ್.ಕೆ, ಉಪಾಧ್ಯಕ್ಷ ರಮೇಶ ದೇವಕರ್, ಕಾರ್ಯದರ್ಶಿ ರಾಘಾವೇಂದ್ರ.ಜಿ.ಮಾನೆ, ಸದಸ್ಯರಾದ ಕಿರಣ್ ಜಿ.ಮಾನೆ ಇದ್ದರು.