ಕಲಬುರಗಿ: ಜಿಲ್ಲೆಯಾದ್ಯಂತ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮನೆ, ದೇವಸ್ಥಾನ, ಕಲ್ಯಾಣ ಮಂಟಪದಲ್ಲಿ ಮದುವೆ, ಸೀಮಂತ ಸೇರಿದಂತೆ ಜನ ಸೇರಿವ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದು, ಅದರಂತೆ ತಾಲೂಕಿನಲ್ಲಿ ಈ ರೀತಿಯ ಎಲ್ಲಾ ಚಟವಟಿಕೆಳನ್ನು ನಿಷೇಧಿಸಲಾಗಿದೆ ಎಂದು ಆಳಂದ ತಹಶೀಲ್ದಾರ ದಯಾನಂದ ಪಾಟೀಲ ತಿಳಿಸಿದ್ದಾರೆ.
ಸಾರ್ವಜನಿಕರು ಅನಗತ್ಯ ಹೊರಗಡೆ ಸಂಚರಿಸಿ ಜನಸಂದಣಿ ಪ್ರದೇಶದಲ್ಲಿ ಸೇರಿ ಮನೆಗೆ ಮರಳಿದಾಗ ಮನೆಯಲ್ಲಿರುವ ವಯಸ್ಕರು ಮತ್ತು ದೀರ್ಘಕಾಲದಿಂದ ರೋಗಕ್ಕೆ ತುತ್ತಾದವರು ಕೊರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಒಂದು ವೇಳೆ ಯಾರಾದರು ತಾಲೂಕಿನಲ್ಲಿ ಮದುವೆ, ಸೀಮಂತ ಹಾಗೂ ಜನಸೇರುವ ಕಾರ್ಯಕ್ರಮ ನಡೆಸಿದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇದಕ್ಕೆ ಸಂಬಂಧಿಸಿದ ಆಯಾ ಹೋಬಳಿಯ ಉಪ ತಹಶೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿ.ಡಿ.ಓ. ಹಾಗೂ ಆರಕ್ಷಕ ಉಪ ನಿರೀಕ್ಷಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.