ಅಂಗಡಿ ತೆರೆದು ವ್ಯಾಪಾರ ಮಾಡಿದಕ್ಕೆ ದಂಡ ಆದೇಶ ಪಾಲನೆ ಮಾಡದ ವ್ಯಾಪಾರಸ್ಥರು/ ಮಾಸ್ಕ್ ಧರಿಸದಿರುವವರಿಗೆ ದಂಡ

0
97

 

ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಲಾಕ್ಡೌನ್ ಆದೇಶ ಹೊರಡಿಸಿದ್ದರೂ, ಕೆಲವು ವ್ಯಾಪಾರಸ್ಥರು ಆದೇಶ ಪಾಲನೆ ಮಾಡದೇ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದನ್ನು ಕಂಡು ಶನಿವಾರ ತಹಸೀಲ್ದಾರ ಸುರೇಶ ವಮರ್ಾ, ಪೌರಾಯುಕ್ತ ಕೆ.ಗುರಲಿಂಗಪ್ಪ, ಪಿಐ ಅಮರೇಶ.ಬಿ ಹಾಗೂ ನೈರ್ಮಲ್ಯ ನಿರೀಕ್ಷರ ಶಿವರಾಜಕುಮಾರ ಅವರ ತಂಡ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.

Contact Your\'s Advertisement; 9902492681


ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಾಢಳಿತ ಸುಮಾರು ಮೂರು ದಿನಗಳಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದರೂ, ಕೆಲವು ಅಂಗಡಿ ಮಾಲೀಕರು ಅಂಗಡಿ ತೆಗೆದು ವ್ಯಾಪಾರ ಮಾಡುತ್ತಿರುವುದನ್ನು ಕಂಡ ತಹಸೀಲ್ದಾರ ಸುರೇಶ ವಮರ್ಾ ಹಾಗೂ ಪೌರಾಯುತ ಕೆ.ಗುರಲಿಂಗಪ್ಪ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.
ಔಷಧ, ತರಕಾರಿ, ಹಾಲು, ಕಿರಾಣಾ ಅಂಗಡಿ ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ತೆರೆಯಬಾರದೆಂದು ಹೇಳಲಾಗಿದೆ. ಕಿರಾಣಾ ಅಂಗಡಿ ಮಧ್ಯಾಹ್ನ 12 ಗಂಟೆಗೆ ಬಂದ್ ಮಾಡಬೇಕೆಂದು ಹೇಳಲಾಗಿದೆ. ಒಂದು ವೇಳೆ 12 ಗಂಟೆಯ ನಂತರ ತೆರೆದಿದ್ದರೇ ಆ ಅಂಗಡಿಯವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ನಗರದಲ್ಲಿ ಮಾಸ್ಕ್ ಧರಿಸದೇ ಬೈಕ್ಗಳ ಮೇಲೆ ಓಡಾಡುತ್ತಿರುವ ತಡೆದು ದಂಡ ಹಾಕಲಾಯಿತು. ಸುಮಾರು 6400ರೂ. ಸಂಗ್ರಹ ಮಾಡಲಾಗಿದೆ.


ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡರೂ ಸಾರ್ವಜನಿಕರು ಮಾತ್ರ ಮಾಸ್ಕ್ ಧರಿಸದೇ ಈ ಬಗ್ಗೆ ಅಸಡ್ಡೆ ಭಾವನೆ ತೋರುತ್ತಿರುವುದು ಮಾತ್ರ ದುರಂತ.ಅದಕ್ಕಾಗಿ ದಂಡ ಹಾಕುವುದರ ಮೂಲಕ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಅಲ್ಲದೇ ಕೆಲವೊಂದು ಕಿರಾಣಿ ಅಂಗಡಿಗಳಲ್ಲಿ ಗುಟಕಾ, ಸಿಗರೇಟ ಮಾರಾಟ ಮಾಡುತ್ತಿರುವುದು ಕೇಳಿ ಬರುತ್ತಿದೆ.ಆದ್ದರಿಂದ ಯಾರು ಗುಟಕಾ, ಸಿಗರೇಟ ಮಾರಾಟ ಮಾಡಬಾರದು ಒಂದು ವೇಳೆ ಕಂಡುಬಂದಲ್ಲಿ ಅವರಿಗೂ ದಂಡ ಹಾಕಲಾಗುವುದು ಎಂದು ತಹಸೀಲ್ದಾರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here