ವಸತಿ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹ

0
36

ಕಲಬುರಗಿ: ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಿಸಿಕೊಂಡಿರುವ ಮತ್ತು ಅಪೂರ್ಣ ಕಟ್ಟಡ ಕೈಗೊಂಡ ಮನೆಗಳ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಡಾ. ಬಾಬು ಜಗಜೀವನರಾಮ್ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಎಸ್. ಕಟ್ಟಿಮನಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದ ಅವರು, ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲ್ಲೂಕುಗಳ ಕಡು ಬಡವರು, ದೀನ, ದಲಿತರು, ಕೃಷಿ ಕೂಲಿ ಕಾರ್ಮಿಕರು ಸರ್ಕಾರದ ವತಿಯಿಂದ ಮಂಜೂರಾದ ಬಸವ ವಸತಿ, ಅಂಬೇಡ್ಕರ್ ವಸತಿ, ಡಾ. ಬಾಬು ಜಗಜೀವನರಾಮ್ ವಸತಿ ನಿಗಮ, (ಲೀಡ್ಕರ್) ಪ್ರಧಾನಮಂತ್ರಿ ಆವಾಸ್ ಮತ್ತು ನಗರ ವಾಜಪೇಯಿ ವಸತಿ ಯೋಜನೆಗಳಡಿ ಮಂಜೂರಾದ ವಸತಿ ಫಲಾನುಭವಿಗಳು ತಮ್ಮ ಸ್ವಂತ ವೆಚ್ಚದಿಂದ ಖಾಸಗಿ ಸಾಲ, ಶೂಲ ಮಾಡಿಕೊಂಡು ಮನೆಗಳಿಗೆ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆದಾಗ್ಯೂ, ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಇನ್ನೂ ಅನುದಾನ ಬಂದಿಲ್ಲ. ಬಂದ ನಂತರ ಪಾವತಿಸುವುದಾಗಿ ಹೇಳುತ್ತಾರೆ. ಇಲ್ಲಿಯವರೆಗೆ ಅನುದಾನ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಮಹಾಮಾರಿ ಕೋವಿಡ್-೧೯ ಸಂದರ್ಭದಲ್ಲಿ ಯಾವುದೇ ಕೆಲಸವಿಲ್ಲದೇ ಫಲಾನುಭವಿಗಳು ಬಹಳ ತೊಂದರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಸರ್ಕಾರದ ಅನುದಾನ ಬಿಡುಗಡೆ ಆಗದೇ ಇರುವುದರಿಂದ ಅವರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೂಡಲೇ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಏನಾದರೂ ಸಾವು ಸಂಭವಿಸಿದಲ್ಲಿ ಅದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ರವಿ ಸಿಂಗೆ, ಮರಲಿಂಗ ವೈ. ತಾರಫೈಲ್, ಶ್ರವನು ತಾರಫೈಲ್, ಕುಶಾಲ ಕಟ್ಟಿಮನಿ, ರಾಜು ಎಲ್. ಕಟ್ಟಿಮನಿ, ಸಚಿನ ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here