ವಿವಿಧ ಬೇಡಿಕೆಗಳನ್ನು ಒತ್ತಾಯಿಸಿಆಶಾ ಕಾರ್ಯಕರ್ತರ ಸಂಘದಿಂದ ಪತ್ರ ಚಳುವಳಿ

0
27

ಶಹಾಬಾದ:ಆಶಾ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪತ್ರ ಚಳುವಳಿ ನಡೆಸಿ ಪೌರಾಯುಕ್ತ ಕೆ.ಗುರಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎ.ಐ.ಯು.ಟಿ.ಯು.ಸಿ ಜಿಲ್ಲಾ ಉಪಾಧ್ಯಾಕ್ಷ ರಾಘವೇಂದ್ರ ಎಂ.ಜಿ. ಹಾಗೂ ನಗರದ ಆಶಾ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಜ್ಯೋತಿ ನಾಗೇಂದ್ರ ಮಾತನಾಡಿ, ಆಶಾ ಕಾರ್ಯಕರ್ತರಿಗೆ ಮಾಸಿಕ ರೂ. 12,000 ಗೌರವಧನ ನೀಡಬೇಕು ಮತ್ತು ಕೊರೋನಾ ಸೋಂಕಿನಿಂದ ರಕ್ಷಣೆಗೆ ಮಾಸ್ಕ್, ಸ್ಯಾನೀಟೇಜರ್, ಗ್ಲೌಸ್ ಇತ್ಯಾದಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಕಳೆದ 16 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಪರಿಹರಿಸದ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಜೀವನ ಯೋಗ್ಯ ವೇತನ/ಗೌರವಧನ ನೀಡದೇ ಕೋರೋನಾ ವಿರುದ್ದದ ಫ್ರಂಟ್ ಲೈನ್ ವಾರಿಯರ್ಸ ಎಂದು ಹೊಗಳಿ, ಹೂ ಮಳೆ ಸುರಿಸಿ, ಶಾಲು ಹಾಕಿ ಸನ್ಮಾನಿಸಿದರೆ, ಕೆಲವರನ್ನು ದೇಶಕ್ಕೆ ರಾಜ್ಯಕ್ಕೆ ಅತ್ಯುತ್ತಮ ಕಾರ್ಯಕರ್ತ ಎಂದು ನಾಮಕರಣ ಮಾಡಿ ಪುಕ್ಕಟೆಯಾಗಿ ಹೊಗಳುತ್ತಿದ್ದಾರೆ.ಆಶಾ ಅವರನ್ನು ಹಗಲು ರಾತ್ರಿ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ದ ಕಳೆದ 16 ದಿನಗಳ ಹಿಂದೆ ಸಿಡಿದೆದ್ದಿರುವ ರಾಜ್ಯದ 42,000 ಆಶಾ ಕಾರ್ಯಕರ್ತರು ವಿವಿಧ ಹಂತದ ಹೋರಾಟ ಮಾಡುತ್ತಿದ್ದಾರೆ. ಸುಧೀರ್ಘ ಹೋರಾಟ ನಡೆಸಿದರೂ ಸಮಸ್ಯೆಗಳ ಕುರಿತು ಮಾತುಕತೆಯನ್ನು ನಡೆಸುವಷ್ಟು ಸೂಕ್ಷ್ಮತೆಯಿಲ್ಲದ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತರು ಮಾತ್ರವಲ್ಲ ರಾಜ್ಯದಾದ್ಯಂತ ಜನರ ಆಕ್ರೋಶವೂ ಹೆಚ್ಚುತ್ತಿದೆ. ಕೂಡಲೇ ಈ ಮಹಿಳಾ ಕಾರ್ಯಕರ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಸಂಘದ ಲಕ್ಷ್ಮೀ, ಜ್ಯೋತಿ, ಸುಹಾಸಿನಿ, ಈರಮ್ಮ, ರೇಣುಕಾ, ಲಕ್ಷ್ಮೀಬಾಯಿ, ಪ್ರಭಾ ಸೇರಿದಂತೆ ಎಲ್ಲಾ ಆಶಾಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here