ತಾಲೂಕಿನಲ್ಲಿ ಕರೊನಾ ಅಟ್ಟಹಾಸ: ಪೊಲೀಸ್ ಠಾಣೆ ಸೀಲ್ ಡೌನ್

0
286

ಶಹಾಬಾದ:ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ ಒಟ್ಟು ಒಂಬತ್ತು ಜನರಿಗೆ ಕರೊನಾ ಸೊಂಕು ದೃಢವಾಗಿರುವುದು ಪತ್ತೆಯಾಗಿದೆ.
ಭಂಕೂರ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದಷ್ಟೇ 7 ಜನರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಈಗ ಮತ್ತೆ ಬೆಂಬಿಡದಂತೆ 7 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೇ ಅಶೋಕ ನಗರದ ವ್ಯಕ್ತಿಗೆ ಹಾಗೂ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗೂ ಕೊರೊನಾ ಇರುವ ಬಗ್ಗೆ ಖಚಿತವಾಗಿದೆ. ಇವರೆಲ್ಲರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕಳಿಸಿಕೊಡಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.


ಇದೇ ತಿಂಗಳ ಜುಲೈ 5ರಂದು ಪೊಲೀಸ್ ಸಿಬ್ಬಂದಿಯೊಬ್ಬ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದ. ಆದರೆ ಪರೀಕ್ಷೆಯ ವರದಿ ಜುಲೈ 20 ರಂದು ಬಂದಿದ್ದು, ಆತನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರಿಂದ ನಗರ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಆತಂಕದಲ್ಲಿದ್ದಾರೆ. ಸೊಂಕಿತ ಪೊಲೀಸ್ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದ 7 ಜನರನ್ನು ನಗರದ ಹಾಸ್ಟೆಲನಲ್ಲಿ  ಕ್ವಾರಂಟೈನಲ್ಲಿ ಇಡಲಾಗಿದೆ. ಕಛೇರಿಯನ್ನು ಸಂಪೂರ್ಣ ಸ್ಯಾನಿಟೈಜರ್ ಮಾಡಲಾಗಿದೆ.
ಸುಮಾರು 15 ದಿನಗಳಿಂದ ಎಲ್ಲಾ ಸಿಬ್ಬಂದಿಗಳೋಂದಿಗೆ ಸಂಪರ್ಕದಲ್ಲಿದ್ದಾನೆ. ಠಾಣೆಗೆ ಬಂದು ಹೋಗಿದ್ದಾನೆ. ಸಿಬ್ಬಂದಿಗಳೊಂದಿಗೆ ಕೆಲಸ ಕಾರ್ಯದಲ್ಲಿ ತೊಡಗಿದ್ದಾನೆ. ಸುಮಾರು 15 ದಿನಗಳ ಹಿಂದೆ ಪರೀಕ್ಷೆ ಮಾಡಿಸಿದಾಗ ವರದಿ ತಡವಾಗಿ ಬಂದ ನಂತರ, ಪಾಸಿಟಿವ್ ಎಂದು ತಿಳಿದಾಗ ಪೊಲೀಸ್ ಸಿಬ್ಬಂದಿ ಭಯಭೀತರಾಗಿದ್ದಾರೆ.ಅಲ್ಲದೇ ಅವನ ಸಂಪರ್ಕಕ್ಕೆ ಬಂದ ಸಿಬ್ಬಂದಿಗಳು ಇತರ ಸಿಬ್ಬಂದಿಗಳ ಜತೆಗೆ ಸಂಪರ್ಕ ಹೊಂದಿದ್ದಾರೆ.ಇದರಿಂದ ನಮಗೂ ಕರೊನಾ ಬಂದರೆ ನಮ್ಮ ಕುಟುಂಬ ವರ್ಗದ ಗತಿಯೇನು ಎಂಬ ಚಿಂತೆ ಪೊಲೀಸ್ ಸಿಬ್ಬಂದಿಯವರಲ್ಲಿ ಕಾಡುತ್ತಿದೆ.ಸೊಂಕಿತರನ್ನು ಸಂಪಕರ್ಿಸಿದ ಹಾಗೂ ಇತರ ಎಲ್ಲಾ ಸಿಬ್ಬಂದಿಗಳನ್ನು ರಾಪಿಡ್ ಪರೀಕ್ಷೆಗೆ ಒಳಪಡಿಸಬೇಕೆಂದು ಪೊಲೀಸರ ಆಗ್ರಹವಾಗಿದೆ.

Contact Your\'s Advertisement; 9902492681

ಕಳೆದ ಹದಿನೈದು ದಿನಗಳ ಹಿಂದಷ್ಟೇ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 4 ಜನ ಪೊಲೀಸರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಕರೊನಾ ತಗುಲಿತ್ತು.ತದನಂತರ ಕಳೆದ ಮೂರು ದಿನಗಳ ಹಿಂದಷ್ಟೇ ನಗರದಸಭೆಯ ಸಿಬ್ಬಂದಿಯೊರ್ವರಿಗೆ ಕರೊನಾ ಇರುವ ಬಗ್ಗೆ ಖಚಿತವಾಗಿತ್ತು.ಇದರ ಬೆನ್ನಲ್ಲೇ ಮತ್ತೆ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಒಂದೆ ದಿನದಲ್ಲಿ 9 ಜನರಿಗೆ ಸೊಂಕು ತಗುಲಿರುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರಲ್ಲಿ ಎಲ್ಲಿಲ್ಲದ ಆತಂಕ ಮನೆಮಾಡಿದೆ.

ನಗರದಲ್ಲಿ ಸೋಮವಾರ ಒಂಬತ್ತು ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಪೊಲೀಸ್ ಠಾಣೆಗೆ ಸ್ಯಾನಿಟೈಜರ್ ಮಾಡಿ, ಸೀಲ್ಡೌನ್ ಮಾಡಲಾಗಿದೆ. ಸೊಂಕಿತ ವ್ಯಕ್ತಿಗಳನ್ನು ಕಲಬುರಗಿಗೆ ಕಳಿಸಿಕೊಡಲಾಗಿದೆ.ಸೊಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಹಾಸ್ಟೆಲನಲ್ಲಿ ಸಾಂಸ್ಥಿಕ ಕ್ವಾರಂಟೈನಲ್ಲಿ ಇಡಲಾಗಿದೆ.ಇತರ ಸಿಬ್ಬಂದಿಗಳನ್ನು ರಾಪಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ – ಸುರೇಶ ವಮರ್ಾ ತಹಸೀಲ್ದಾರ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here