ಟಾಸ್ಕಫೋರ್ಸ ಸಮಿತಿ ಸದಸ್ಯರಿಗೆ ವಿಡಿಯೋ ತರಬೇತಿ ಕಾರ್ಯಾಗಾರ

0
61

ಶಹಾಬಾದ:ನಗರಾಭಿವೃದ್ಧಿ ಇಲಾಖೆ, ಪೌರಾಢಳಿತ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೊರೊನಾ ನಿಯಂತ್ರಿಸಲು ವಾರ್ಡ ಮಟ್ಟದ ಕಾರ್ಯಾಚರಣೆ ಪಡೆ ಹಾಗೂ ಬೂತ್ ಮಟ್ಟದ ಸಮಿತಿಗಳ ಸದಸ್ಯರಿಗೆ ಸೋಮವಾರ ನಗರಸಭೆಯಲ್ಲಿ ಆಯೋಜಿಸಲಾದ ವಿಡಿಯೋ ತರಬೇತಿ ಕಾರ್ಆಯಾಗಾರ ಯೋಜಿಸಲಾಗಿತ್ತು.


ತರಬೇತಿ ಕಾರ್ಯಕ್ರಮದ ನಂತರ ಮಾತನಾಡಿದ ಪೌರಾಯುಕ್ತ ಕೆ.ಗುರಲಿಂಗಪ್ಪ ,ಈಗಾಗಲೇ 27 ಟಾಸ್ಕ್ ಫೋರ್ಸ ಸಮಿತಿಗಳನ್ನು ರಚಿಸಲಾಗಿದೆ. ಒಟ್ಟು 27 ವಾರ್ಡಗಳಲ್ಲಿ ಪ್ರತಿ ವಾರ್ಡಗೆ 5 ಸದಸ್ಯರನ್ನು ಒಳಗೊಂಡಂತೆ 135 ಜನರನ್ನು ಹಾಗೂ 46 ಬೂತ್ ಮಟ್ಟದಲ್ಲಿ 184 ಸದಸ್ಯರನ್ನು ನಿಯೋಜಿಸಲಾಗಿದೆ. ನಗರದ ಒಟ್ಟು 27 ವಾರ್ಡಗಳಲ್ಲಿ ಈ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು, ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕೋವಿಡ್ ನಿಯಂತ್ರಿಸಲು ಸಾಧ್ಯ.

Contact Your\'s Advertisement; 9902492681

ಆಯಾ ವಾರ್ಡನ ನಗರಸಭೆಯ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಒಳಗೊಂಡಿರುತ್ತಾರೆ. ಆದ್ದರಿಂದ ಈ ಎಲ್ಲಾ ಸಮಿತಿಯವರು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಸೊಂಕಿತರನ್ನು ಆಸ್ಪತ್ರೆಗೆ ಸ್ಥಳಾಠಂತರಿಸುವುದು, ಸಂಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಕಳಿಸುವ ಕಾರ್ಯ ಮಾಡಬೇಕಿದೆ. ಆಯಾ ವಾರ್ಡನ ಜನರು ಎದುರಿಸುವ ತೊಂದರೆಗಳನ್ನು ನಗರಸಭೆಯ ಮತ್ತು ತಾಲೂಕಾಡಳಿತದ ಗಮನಕ್ಕೆ ತರಬೇಕು. ಸೊಂಕಿತರ ಕುಟುಂಬ ವರ್ಗಕ್ಕೆ ಆತ್ಮಸ್ಥೈರ್ಯ ತುಂಬುವುದು, ನೆರೆಹೊರೆಯವರಿಗೆ ಅಗತ್ಯ ತಿಳುವಳಿಕೆ ನೀಡುವುದು ಮುಂತಾದ ಕಾರ್ಯಗಳನ್ನು ಕೈಗೊಳ್ಳಬೇಕಿದೆ.ಅಲ್ಲದೇ ಕೋವಿಡಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೆ ಟಾಸ್ಕ್ ಫೋರ್ಸ ಸಮಿತಿ ಸಹಕಾರ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ  ನಗರಸಭೆಯ ಎಇಇ ಪುರುಷೋತ್ತಮ,ಕಂದಾಯ  ಅಧಿಕಾರಿ ಸುನೀಲ, ಆರೋಗ್ಯ ನೀರಿಕ್ಷಕ ಶಿವರಾಜಕುಮಾರ, ವಾರ್ಡ ಮಟ್ಟದ ಮತ್ತು ಬೂತ್ ಮಟ್ಟದ ಟಾಸ್ಕ್ ಫೋರ್ಸ ಕಾರ್ಯಾಚರಣೆ ಸಮಿತಿಯ ಸದಸ್ಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here