ಕಲಬುರಗಿಯಲ್ಲಿ ವೆಂಟಿಲೇಟರ್‌ ಸಿಗದೆ ಅಂಗನವಾಡಿ ಕಾರ್ಯಕರ್ತೆ ಸಾವು!?

0
325

ಕಲಬುರಗಿ: ವೆಂಟಿಲೇಟರ್‌ ಸಿಗದೆ, ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಓರ್ವರು ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಹೊನ್ನಕಿರಣಗಿ ಗ್ರಾಮದ ನಿವಾಸಿಯಾದ ಅಕ್ಕನಾಗಮ್ಮ (50) ಸಾವನ್ನಪ್ಪಿರುವ ಮಹಿಳೆ, ಲೋ ಬಿಪಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಕನಾಗಮ್ಮ . ನಿನ್ನೆ ರಾತ್ರಿ 2 ಗಂಟೆಯಿಂದ ವೆಂಟಿಲೇಟರ್‌ ಗಾಗಿ ಕುಟುಂಬಸ್ಥರು ಪರದಾಡಿದರು ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಜಿಮ್ಸ್‌, ಇಎಸ್‌ ಐ, ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಕೊನೆಗೆ ಇಂದು ಹೈದ್ರಾಬಾದಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ವೆಂಟಿಲೇಟರ ಸಿಗದೆ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಸ್ಪತ್ರೆಗೆ ಭೇಟಿನೀಡಿದ ರೈತ ಸಂಘಟನೆ, ಸಿಪಿಐಎಂ ಜಿಲ್ಲಾ ಮುಖಂಡರಾದ ಮಾರುತಿ ಮಾನ್ಪಡೆ ಮಾತನಾಡಿ ಕೊರೊನಾ ವಾರಿಯರ್ಸ್‌ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಗೆ ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಯಿಂದ ಜನರು ಮೃತಪಟ್ಟುತಿದ್ದಾರೆ.

ಕಲಬುರಗಿಯಲ್ಲಿ ಈ ಹಿಂದೆ ವೆಂಟಿಲೇಟರ್ ಕೊರೆತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ನೇತೃತ್ವದಲ್ಲಿ ನಡೆದ ಕೊರೊನಾ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಕುರಿತು ಸಭೆಯಲ್ಲಿ ಈ ವಿಷಯದ ಕುರಿತು ಉಸ್ತುವಾರಿ ಸಚಿವ ಮತ್ತು ಮಾನ್ಪಡೆ ಅವರ ಮದ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಕಾರಜೋಳ ಅವರನ್ನು ಸಭೆಯಿಂದ ಹೊರಗಟ್ಟಿದರು.

ಈ ಕುರಿತು ಸರಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ ಕಾರಣ ಜಿಲ್ಲೆಯಲ್ಲಿ ಚಿಕಿತ್ಸೆ ಇಲ್ಲದ ಜನರು ಪ್ರಾಣ ಬಿಡುವಂತಹದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here