ಜೇವರ್ಗಿ : ನಿನ್ನೆ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಜೇವರ್ಗಿ ನಾಗರಿಕರು ಸಂಕಷ್ಟವನ್ನು ಎದುರಿಸುವ ಸ್ಥಿತಿಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಯಿತು .ಇಲ್ಲಿನ ತಾಲೂಕು ಕಚೇರಿಗಳ ಸಂಕೀರ್ಣವಾದ ತಹಸಿಲ್ದಾರರ ಕಾರ್ಯಾಲಯ ಅಕ್ಷರಸಹ ನಡು ಗಡ್ಡೆಯಾಗಿ ಗೋಚರವಾಗುತ್ತಿತ್ತು.
ತಸಿಲ್ದಾರ್ ಸೇರಿದಂತೆ ಇತರರು ನಿಲ್ಲಿಸಿದ ವಾಹನಗಳು ಅರ್ಧ ಮುಳುಗಿ ಹೋಗಿ ಅಲ್ಲಿಂದ ಕದಲಿಸಿದ ,ತೆಗೆಯಲು ಬಾರದೆ ಇರುವ ಪರಿಸ್ಥಿತಿಯನ್ನು ತಲುಪಿದವು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯ ರಸ್ತೆ ಸೇರಿದಂತೆ ತಃಸಿಲ್ ಕಾರ್ಯಾಲಯಕ್ಕೆ ಸಂಪರ್ಕವನ್ನು ಹೊಂದಿಸುವ ರಸ್ತೆಗಳು ಮೊಳಕಾಲಿನ ವರೆಗೂ ನೀರು ತುಂಬಿಕೊಂಡು ಜನಸಂಚಾರಕ್ಕೆ ಭಾರಿ ತಡೆ ಉಂಟು ಮಾಡಿತು.
ದ್ವಿಚಕ್ರ ವಾಹನ ಸವಾರರು ತಹಸಿಲ್ ಕಾರ್ಯಲಯದ ಮುಖ್ಯ ರಸ್ತೆ ಮೇಲೆ ಸಂಚರಿಸಲು ಹರಸಾಹಸ ಪಡುವಂತೆ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಾಹ್ನ ಜನಸಂಚಾರ ಕಡಿಮೆ ಇದ್ದರೂ ಸಹ ಅಗತ್ಯ ಕೆಲಸಗಳಿಗಾಗಿ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೇರಿದಂತೆ ಆಹಾರ ನಿರೀಕ್ಷಕರು ಹಾಗೂ ಉಪನೊಂದಣಾಧಿಕಾರಿಗಳು ಇತರ ಕಚೇರಿಗಳಿಗೆ ಬರುವ ಜನರಿಗೆ ಈ ಮಳೆಯು ಕಿರಿಕಿರಿಯನ್ನುಂಟುಮಾಡಿದೆ.
ಅಲ್ಲದೆ ತಹಸಿಲ್ ಕಾರ್ಯಾಲಯದ ಎದುರು ಇರುವ ಬಡಾವಣೆಗಳಲ್ಲಿ ನೀರು ತುಂಬಿಕೊಂಡು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹರಿಯುತ್ತಿರುವ ಕಾರಣ ಜನ ಹಾಗೂ ವಾಹನಗಳ ಸಂಚಾರಕ್ಕೆ ತಡೆ ಉಂಟು ಮಾಡುವಂತೆ ಗೋಚರವಾಯಿತು.
ಪ್ರತಿ ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣವು ಹೆಚ್ಚಾಗಿದ್ದು ಹಳ್ಳಿಗಳಲ್ಲಿನ ಜನರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಸಹಾಯಕವಾಗಿರುವುದು, ಆದರೆ ಅನಿರೀಕ್ಷಿತ ಬಿಟ್ಟು ಬಿಡದೆ ಸುರಿಯುವ ಮಳೆಯು ನಗರ ಪ್ರದೇಶದ ಜನರ ಜೀವನಕ್ಕೆ ದಿನನಿತ್ಯದ ವ್ಯವಹಾರಗಳಿಗೆ ವಹಿವಾಟುಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಕಂಡುಬಂದಿತು.