ತಳವಾರ-ಪರಿವಾರ ಸಮುದಾಯಕ್ಕೆ ಎಸ್.ಟಿ ಸ್ಥಾನಮಾನಕ್ಕೆ ಆಗ್ರಹ

0
130

ಜೇವರ್ಗಿ : ರಾಜ್ಯ ಸರ್ಕಾರವು ತಳವಾರ ಪರಿವಾರದ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಿ ರಾಜ್ಯಪಾಲರ ಅಂಕಿತ ಗೊಂಡಿರುವ ಮಸೂದೆಯನ್ನು ಜಾರಿಗೊಳಿಸಲು ಹಿಂದೆ ಹಾಕುತ್ತಿರುವುದಕ್ಕೆ ಜಾತ್ಯತೀತ ಜನತಾದಳ ಪಕ್ಷ ಪ್ರಬಲವಾಗಿ ಖಂಡಿಸಿದೆ. ತಳವಾರ ಪರಿವಾರದ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಪ್ರಮಾಣಪತ್ರ ನೀಡಬೇಕೆಂದು ಜೇವರ್ಗಿ ಪಟ್ಟಣದ ತಸಿಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲೂಕು ಅಧ್ಯಕ್ಷರಾದ ಬಸವರಾಜ್ ಖಾನ್ ಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಅವರು ತಳವಾರ ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರಕಾರವು ಗುರುತಿಸಿದ್ದು ಇವುಗಳನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ .ಇದರಿಂದಾಗಿ ಸರ್ಕಾರದ ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯಗಳು ಕೇವಲ ಘೋಷಣೆಗಳಾಗಿವೆ ಹೊರತು ಜಾರಿಗೆ ಬರುತ್ತಿಲ್ಲ. ಈ ಜನಾಂಗದ ಹಿತ ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಹಂತಹಂತವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಸರಕಾರದ ಗೆಜೆಟ್ ನಲ್ಲಿ ನೋಟಿಫಿಕೇಶನ್ ಆದರೂ ಸಹ ಇನ್ನೂ ಪರಿವಾರ ಜಾತಿಗಳು ಸೌಲಭ್ಯವನ್ನು ಪಡೆಯುವಲ್ಲಿ ನಿರಾಸೆಯನ್ನು ಹೊಂದುತ್ತಿದ್ದು, ಸಮುದಾಯದ ಜನರು ನಿತ್ಯ ತಹಸಿಲ ಕಾರ್ಯಾಲಯಕ್ಕೆ ಅಯುತ್ತಿರುವುದು ಅಲ್ಲದೆ ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರಗಳು ಬೇಸರವನ್ನು ಉಂಟುಮಾಡಿವೆ, ಇದರಿಂದಾಗಿ ಸರ್ವಜನರ ಸಮಾನತೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಸಾಕಾರಗೊಳ್ಳಲು ಆಳುವ ಸರ್ಕಾರ ಕೊಕ್ಕೆ ಹಾಕಿವೆ.
ಎಂದು ಈ ಕೂಡಲೇ ಸರ್ಕಾರ ತೀರ್ಮಾನ ಕೈಗೊಂಡು ನಿರ್ದೇಶನ ನೀಡಬೇಕೆಂದು . ಜೆಡಿಎಸ್ ಯುವ ಮುಖಂಡರಾದ ವಿಜಯಕುಮಾರ್ ಹಿರೇಮಠ ಆಗ್ರಹಿಸಿದ್ದಾರೆ.

ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ತಳವಾರ ಪರಿವಾರದ ಜಾತಿಗಳನ್ನು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಿ ಸಮುದಾಯದ ಹಿತಾಸಕ್ತಿ ಕಾಯುವಂತೆ ಹಾಗೂ ಇದನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಪಕ್ಷದ ನೇತೃತ್ವದಲ್ಲಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ಪಕ್ಷದ ಯುವ ಮುಖಂಡರಾದ ವಿಜಯ್ ಕುಮಾರ್ ಹಿರೇಮಠ, ಭೀಮರಾಯ ಜನಿವಾರ ,ಮೊಹಮ್ಮದ್ ಹನೀಫ್ ಬಾಬಾ, ಕೇರನಾಥ ಪಾರ್ಸಿ, ವಿಜಯಕುಮಾರ್ ನರಿಬೋಳ, ನಿಂಗನಗೌಡ ನಂದಿಹಳ್ಳಿ, ಖಯುಂಜಮಾದಾರ್,ಸಂಗಣ್ಣ ಹೂಗಾರ್, ಸಿದ್ದು ಮಾವನೂರ್, ಬಾಪುಗೌಡ ಪಾಟೀಲ್, ಮಲ್ಲಣ್ಣ ಗೌಡ ಅರಳಗುಂಡಗಿ ,ಕಾಶಿನಾಥ್ ಮೆಲ್ಕಾರ್, ಶ್ರೀಶೈಲ ಮುದುಗಲ್, ಮಲ್ಲು ತಳವಾರ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here