ಕಲಬುರಗಿ: ಸುಮಾರು ದಶಕಗಳ ಹೋರಾಟ ಹಾಗೂ ಬಲಿದಾನಗಳ ಪ್ರತಿಫಲವಾಗಿ ಇಂದು ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ರಾಮ ಮಂದಿರದ ಶಿಲಾನ್ಯಾಸ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನೆರವೇರಿಸಲಾಗುತ್ತಿರುವುದು. ಈ ಪ್ರಯುಕ್ತ ವಿಶ್ವದ ಮೂಲೆ ಮೂಲೆಗಳಿಂದ ಪವಿತ್ರ ಮಣ್ಣು ಹಾಗೂ ಪವಿತ್ರ ಜಲ ಸಂಗ್ರಹಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ವತಿಯಿಂದ ಇಂದು ಜಿಲ್ಲೆಯ ಪವಿತ್ರ ಸ್ಥಳಗಳಾದ ಶ್ರೀ ಶರಣಬಸವೇಶ್ವರ ದೇವಸ್ಥಾನ, ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ, ಕಾಳಗಿಯ ಕಾಲೇಶ್ವರ ದೇವಸ್ಥಾನ, ಕಲಬುರಗಿ ಯ ರಾಮತೀರ್ಥ್, ಕಮಲಾಪುರದ ರಾಮತೀರ್ಥ್, ನರೊಣಾದ ಕ್ಷೇಮಲಿಂಗೇಶ್ವರ ದೇವಸ್ಥಾನ, ಹಿಪ್ಪರಗಾದ ರಾಮಲಿಂಗೇಶ್ವರ ದೇವಸ್ಥಾನ ಗಳಿಂದ ಸಂಗ್ರಹಿಸಲಾದ ಪವಿತ್ರ ಮಣ್ಣು ( ಮೃತ್ತಿಕೆ) ಹಾಗೂ ಪವಿತ್ರ ಜಲ ಅಯೋಧ್ಯೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜಿಸಿ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ವಿ. ಹಿಂ.ಪ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಸುಭಾಷ್ ಕಾಂಬಳೆ ಸುರೇಶ್ ಹೇರೂರ್, ಶೇಷಾದ್ರಿ ಕುಲಕರ್ಣಿ, ಶಿವರಾಜ್ ಸಂಗೋಳಗಿ, ಸಾಗರ್ ರಾಥೋಡ್ ಹಿಂದೂ, ಶಾಂತು ಬಿರಾದಾರ್, ಅಶ್ವಿನ್ಕುಮಾರ್ ಇದ್ದರು.