ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಿಐಟಿಯು, ಕಪ್ರಾರೈಸಂ ಹಾಗೂ ಕಪ್ರಾಕೃಕೂ ಸಂಘದಿಂದ ಪ್ರತಿಭಟನೆ

0
55

ಶಹಾಬಾದ:ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು), ಕರ್ನಾಟಕ ಪ್ರಾಂಥ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಂಟಿ ಸಮಿತಿಯಿಂದ ಶುಕ್ರವಾರ ವಿವಿಧ ಬೇಡಿಕೆಗಳನ್ನಿ ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಮುಖಾಂತರ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಕೋವಿಡ್-19 ಸಂಕಷ್ಟವನ್ನು ಗಂಬೀರವಾಗಿ ಎದುರಿಸುತ್ತಿದೆ.ಇಂತಹ ಸಂದರ್ಭದಲ್ಲಿ ಇದನ್ನು ಎದುರಿಸುವುದನ್ನು ಬಿಟ್ಟು ಕಾರ್ಪೋರೇಟರ್ ಕಂಪನಿಗಳಿಗೆ ಲೂಟಿ ಮಾಡಲು ಅನುಕೂಲ ಮಾಡಿಕೊಡುತ್ತಿದೆ.ಆದ್ದರಿಂದ ಕೋವಿಡ್-19 ಎದುರಿಸಲು ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಕ್ರಮ ವಹಿಸಬೇಕು. 100 ಬೆಡ್ ಐಸಿಯು ಮಂಜೂರಾತಿ ನೀಡಬೇಕು. ನಾಲ್ಕೈದು ದಿನಗೊಳಗಾಗಿ ಕೊರೊನಾ ಪರೀಕ್ಷಯ ವರದಿ ಬರುವಂತೆ ನೋಡಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತರ ಅಕ್ಕನಾಗಮ್ಮಗೆ ಚಿಕಿತ್ಸೆ ನೀಡದಿರುವುದರಿಂದ ಅವರ ಸಾವಿಗೆ ಕಾರಣರಾದವರನ್ನು ಅಮಾನತುಗೊಳಿಸಬೇಕು.

Contact Your\'s Advertisement; 9902492681

ಆದಾಯ ತೆರಿಗೆ ವ್ಯಾಪ್ತಿಗೆ ಬರದ ಕುಟುಂಬಗಳಿಗೆ ಕೋವಿಡ್ ಸಮಸ್ಯೆ ಮುಗಿಯುವವರೆಗೂ 7550 ರೂ. ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಬೇಕು. ಮಳೆಗಾಲದಲ್ಲಿ ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸಲಾಗಿದ್ದು, ಇದನ್ನು ಸರಿಪಡಿಸಬೇಕು.ವಿದ್ಯಾವಂತ ನಿರೋದ್ಯೋಗ ಯುವ ಮತ್ತು ಯುವತಿಯರಿಗೆ ಹತ್ತು ಸಾವಿರ ರೂ.ಗಳನ್ನು ಒದಗಿಸಬೇಕು. ಕೈಗಾರಿಕೆ ಹಾಗು ಹಣಕಾಸು ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಭೂ ವ್ಯವಸಾಯ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರಿಗೆ ಹೊಸ ಸಾಲ ನೀಡುವಂತಾಗಬೇಕು. ಕೊರೊನಾ ಕ್ವಾರಂಟೈನ್ನಲ್ಲಿ ಅಡುಗೆ ಮಾಡಿದ ಬಿಸಿಯೂಟ ನೌಕರರಿಗೆ 10,000ರೂ. ವೇತನ ಪಾವತಿ ಮಾಡಬೇಕೆಂದು ಆಗ್ರಹಿಸಿದರು.
ಸಿಐಟಿಯು ತಾಊಕಾ ಅಧ್ಯಕ್ಷ ಶೇಖಮ್ಮ ಕುರಿ, ಕರ್ನಾಟಕ ಪ್ರಾಂಥ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ, ಗುಂಡಪ್ಪ ಗೋಳಾ,ಕಾರ್ಮಿಕ ಮುಖಂಡ ಈರಣ್ಣ ಹೊಸಮನಿ, ಅಂಗನವಾಡಿ ನೌಕರರ ಸಂಘದ ರುದ್ರಮ್ಮ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here