ಕಲಬುರಗಿ: ಮಹಾಮಾರಿ ಕೊರೊನಾ ನಿಯಂತ್ರಣ ಮತ್ತು ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿದ ಕಲಬುರಗಿ ಮಹಾನಗರ ಪಾಲಿಕೆಯ ಎಸ್.ಐ ಅಧಿಕಾರಿಯಾದ ದಿಪಕ್ ಕುಮಾರ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಕುಮಾರ ಅವರಿಗೆ ಫಿರದೋಸ್ ನಗರ ವೇಲ್ಫರ್ ಸೊಸೈಟಿಯಿಂದ ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಉಪಾಧ್ಯಕ್ಷ ಮಹೇರಾಜುದ್ದಿನ್, ಕಾರ್ಯದರ್ಶಿ ಸಾಜಿದ್ ಅಲಿ, ಹೈದರ್ ಅಲಿ ಇನಾಮ್ದಾರ್, ಅಬ್ದುಲ್ ಮಜೀದ್, ನಿವೃತ್ತಿ ನೌಕರರಾದ ಅಬ್ದುಲ್ ಚಾಂದ್ ಸಾಬ, ಸಾದೀಕ್, ಇಬ್ರಾಹಿಮ್ ಮಂತ್ರಿ, ಅಬ್ದುಲ್ ರಜಾಕ್, ಮಹ್ಮದ್ ಇಮ್ರಾನ್, ಅಜಹರ್, ಹಸನ್ ಅಲಿ ಸಾಬ್ ಸೇರಿದಂತೆ ಸೊಸೈಟಿಯ ಸದಸ್ಯರು ಇದ್ದರು.