ಮಾಸ್ಕ್ ಧರಿಸಿ ಕೊರೊನಾ ಓಡಿಸಿ: ದ್ವಿಚಕ್ರ ವಾಹನದ ಮೇಲೆ ಪ್ರಚಾರ 

0
51
  • ರಾಜು ಮುದ್ದಡಗಿ
ಜೇವರ್ಗಿ : ಇಂದಿನ ದಿನಮಾನಗಳಲ್ಲಿ ಅನೇಕರು ತಮ್ಮ ವಾಹನಗಳ ಮೇಲೆ ದೇವರ ಹಾಗೂ ಕುಟುಂಬದ ಸದಸ್ಯರ,ಪ್ರಿಯರ, ಜನನಾಯಕರುಗಳ , ಮುಖಂಡರುಗಳ ಹೆಸರುಗಳನ್ನು ಹಾಗೂ ತಮ್ಮ ಹೆಸರುಗಳನ್ನು ಹಾಕಿಸಿಕೊಂಡು ಅವುಗಳನ್ನು ಎಲ್ಲರೂ ನೋಡುವಂತೆ ರಾರಾಜಿಸುವಂತೆ ಪ್ರದರ್ಶಿಸುತ್ತಾ ಓಡಾಡುವುದನ್ನು ಕಂಡಿದ್ದೇವೆ.

ಆದರೆ ಜೇವರ್ಗಿ ಪಟ್ಟಣದಲ್ಲಿ ಒಬ್ಬ ದೇಶಭಕ್ತ ಧರ್ಮಣ್ಣ ಎಂ ಖರ್ಗೆ ಎನ್ನುವರು ತಮ್ಮ ಟಿವಿಎಸ್ ವಾಹನದ ಹಿಂದೆ ಹಾಗೂ ಮುಂದುಗಡೆ ಕರೊನಾ ಓಡಿಸಿ ಮಾಸ್ಕ್ ಧರಿಸಿ ,ಆರೋಗ್ಯದಿಂದಿರಿ ಹಾಗೂ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ನಮ್ಮ ಭಾರತ, ಬನ್ನಿರಿ ಸ್ವಚ್ಛ ಭಾರತವನ್ನು ನಿರ್ಮಾಣ ಮಾಡೋಣ ಎನ್ನುವ ಸಂದೇಶವನ್ನು ಹೊತ್ತು ನಾಮಫಲಕವನ್ನು ಪ್ರದರ್ಶನ ಮಾಡುತ್ತಾ ಪಟ್ಟಣದಲ್ಲಿ ಸಂಚರಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ನಮ್ಮಲ್ಲಿನ ಇಂದಿನ ಅನೇಕ ಯುವಕರು ಅನವಶ್ಯಕ ವಿಷಯಗಳ ಕುರಿತು ಚರ್ಚೆ, ಹರಟೆ ಸೇರಿದಂತೆ ಕಾಲಹರಣ ಮಾಡುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ವ್ಯಾಟ್ಸಪ್- ಫೇಸ್ಬುಕ್ ಸೇರಿದಂತೆ ಸಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಚರ್ಚೆಗೆ ತೊಡಗಿರುವ ಯುವಜನತೆಗೆ ಧರ್ಮಣ್ಣ ಒಬ್ಬರು ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ . ಮೇರಾ ಭಾರತ್ ಮಹಾನ್ ಎನ್ನುವ ದೇಶಭಕ್ತಿ ಘೋಷಣೆಗಳನ್ನು ಹಾಕಿಕೊಂಡಿರುವ ಇವರಿಗೆ ನಾವೆಲ್ಲರೂ ಗೌರವಿಸೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here