ಈ ನಾಡು, ರಾಷ್ಟ್ರಕಂಡ ರಾಜಕೀಯ ನಾಯಕರು ಮತ್ತು ಅಜಾತ ಶತ್ರು… ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು 81 ವರ್ಷದ ಬದುಕಿನ ಜೊತೆಗೆ 50 ವರ್ಷದ ರಾಜಕೀಯ ಜೀವನದ ಸಂಕ್ಷಿಪ್ತ ಮಾಹಿತಿ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಹುಟ್ಟೂರು. ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಕಲಬುರಗಿಯಲ್ಲಿ ನಂತರ ಹೈದರಾಬಾದ್ ನಲ್ಲಿ ಉನ್ನತ ಕಾನೂನು ಶಿಕ್ಷಣ, ನಂತರ ವಕೀಲರಾಗಿ ಸೇವೆ. ಪ್ರಭಾವತಿ ಅವರ ಧರ್ಮಪತ್ನಿ, ಇಬ್ಬರು ಪುತ್ರರು, ಒಬ್ಬರು ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಇನ್ನೊಬ್ಬರು ವಿರೋಧ ಪಕ್ಷದ ಮುಖ್ಯ ಸಚೇತಕರು ಮತ್ತು ಜೇವರ್ಗಿ ಶಾಸಕರಾದ ಡಾ. ಅಜಯಸಿಂಗ್, ಒಬ್ಬರು ಸುಪುತ್ರಿ ಪ್ರೀರ್ಯದರ್ಶಿನಿ ಚಂದ್ರಸಿಂಗ್ ಅವರದು ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಜೊತೆಗೆ ಸಂತಸದ ಜೀವನವಾಗಿತ್ತು.
ಅಜಾತಶತ್ರು ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಸಾಹೇಬರು ಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿ ಇದು ಸಾರ್ವಜನಿಕ ಸೇವೆ ಮಾಡಿದರು.
13 ಸಾರ್ವತ್ರಿಕ ಚುನಾವಣೆಯಲ್ಲಿ 11 ಬಾರಿ ಗೆಲುವು ಸಾಧಿಸಿದ ಏಕೈಕ ವ್ಯಕ್ತಿ. ಪ್ರಥಮ ಚುನಾವಣೆಯಿಂದ 10 ಚುನಾವಣೆ ಸತತ ಗೆಲುವು ಒಂದು ಬಾರಿ ಸೋಲು, ಮತ್ತೆ ಒಂದು ಬಾರಿ ಗೆಲುವು ನಂತರ ಸೋಲು.
ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ, ನಂತರ ಸತತವಾಗಿ ಎಂಟು ಬಾರಿ ಜೇವರ್ಗಿ ಶಾಸಕರಾಗಿ, ಒಂದು ಬಾರಿ ಕಲಬುರಗಿ ಜಿಲ್ಲೆಯ ಲೋಕಸಭೆ ಸದಸ್ಯರಾಗಿ, ಇನ್ನೊಂದು ಬಾರಿ ಬೀದರ್ ಜಿಲ್ಲೆಯ ಲೋಕಸಭಾ ಸದಸ್ಯರಾಗಿದ್ದರು.
ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ, ಹಲವಾರು ಬಾರಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಗೃಹ ಖಾತೆ, ಲೋಕೋಪಯೋಗಿ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಸಚಿವರಾಗಿ ಇನ್ನೂ ಹಲವಾರು ಖಾತೆಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು. ನಮ್ಮ ಭಾಗದಲ್ಲಿ ಹೈಕೋರ್ಟ್ ಪೀಠ, ರಸ್ತೆ ಕಾಮಗಾರಿಗಳು, ಸರ್ಕಾರದ ಕಛೇರಿ ಕಟ್ಟಡಗಳು, ಆರೋಗ್ಯ, ಶಿಕ್ಷಣ ಸೇವೆ ಮಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ನಮ್ಮ ಹೈ.ಕ.ಭಾಗದ 371(J) ಕಲಂ ತಿದ್ದುಪಡಿ ರೂವಾರಿಗಳು ಆಗಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮುಖಂಡರಿಗೆ ಚಿರಪರಿಚಿತರು.
ಎಲ್ಲಾ ಕಾರ್ಯಕರ್ತರಿಗೆ ಆತ್ಮೀಯತೆಯಿಂದ ಮಾತನಾಡುವ ಸರಳ, ಸಜ್ಜನ ರಾಜಕಾರಣಿಗಳು ಆಗಿದ್ದರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಹೃದತೆಯ ರಾಜಕಾರಣಿಗಳು, ಇಡೀ ರಾಜ್ಯ ರಾಷ್ಟ್ರ ನಾಯಕರು ಅವರ ಜೊತೆಗೆ ಉತ್ತಮ ಒಡನಾಡಿ ಆಗಿದ್ದರು. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚಿನ ಅಭಿಮಾನಿಗಳ ಬಳಗ ಹೊಂದಿದ ರಾಜಕಾರಣಿ ಎನ್ನಬಹುದು. ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು ಆಗಿದ್ದರು.
ಇಂದಿನ ಆಧುನಿಕ ಯುಗದಲ್ಲಿ ಯುವಕರಿಗೆ, ರಾಜಕಾರಣಿಗಳಿಗೆ ಮಾದರಿ ಎನ್ನಬಹುದು. ಅವರ ನೆನಪು ಈಗ ಮಾತ್ರ. ಅವರ ತೃತೀಯ ವರ್ಷದ ಪುಣ್ಯೆಸ್ಮರಣೆ ದಿನಾಂಕ 27.07.2020, ಸೋಮವಾರ ಇದೆ. ಕೊರೋನಾ ಕಾಲದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸ್ಯಾನಿಟೆಜರ್ ಉಪಯೋಗಿಸಿ, ಆರೋಗ್ಯ ಕಾಪಾಡಿಕೊಳ್ಳುವುದು ಜೊತೆಗೆ ಸಂಕ್ಷಿಪ್ತವಾಗಿ ಅವರ ಪುಣ್ಯೆಸ್ಮರಣೆ ಕಾರ್ಯಕ್ರಮಗಳು ಅವರ ಅಭಿಮಾನಿಗಳು ಆಚರಣೆ ಮನೆ ಮನಗಳಲ್ಲಿ ನಡೆಯಲ್ಲಿ ಎಂದು ಮನವಿ ಮತ್ತು ವಿನಂತಿ.