ಕಲಬುರಗಿ: ಯುವಕರು ಸರಕಾರಿ ನೌಕರಿ ಕನಸು ಕಾಣುವುದಕ್ಕಿಂತಲೂ ಹೆಚ್ಚಾಗಿ ಮೊದಲು ದೇಶ ಸೇವೆ ಈಶ ಸೇವೆ ಎಂದು ತಿಳಿದುಕೊಂಡು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುತ್ತೇನೆ ಎನುವ ಮನೋಭಾವ ರೂಢಿಸಿಕೊಳ್ಳಬೇಕು ಅಂದಾಗ ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗುತ್ತದೆ ವಿಶ್ವ ಗುರು ವಾಗುತ್ತದೆ ಇತ್ತೀಚಿಗೆ ಯುವಕರ ಮನಸ್ಥಿತಿಯು ಕೂಡ ಬದಲಾಗಿದೆ ದೇಶಪ್ರೇಮ ಜಾಗೃತ ಗೊಂಡಿದೆ ಯುವಕರು ದೇಶಪ್ರೇಮಿಗಳಾಗುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಆಶಾದಾಯಕ ಬೆಳವಣಿಗೆ ಯುವಕರು ದುಶ್ಚಟಗಳಿಂದ ದೂರವಿದ್ದು ತಮ್ಮ ಆರೋಗ್ಯದ ಜೊತೆಗೆ ದೇಶದ ಕುರಿತು ಚಿಂತಿಸುವ ರಾಗಬೇಕು ಈಗ ಈ ಬೆಳವಣಿಗೆ ಆಗುತ್ತಿದೆ ಇದು ಒಳ್ಳೆಯ ಬೆಳವಣಿಗೆ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜಶ್ರೀ ಲಿಂಗರಜಪ್ಪ ಅಪ್ಪ ಹೇಳಿದರು.
ಕಾರ್ಗಿಲ್ ವಿಜಯೋತ್ಸವ ದಿವಸ್ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಅಪ್ಪ ತೋಟದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ದಿವಸ್ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಜಯಶಾಲಿಗಳಾಗಿ ಬಂದ ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಯೂೕದರನ್ನು ಸನ್ಮಾನಿಸಿ ಆಶೀರ್ವದಿಸಿ ನಿನ್ನನ್ನು ನೋಡಿದಾಗ ಖುದ್ದು ನಾವೇ ಯುದ್ಧದಲ್ಲಿ ಭಾಗವಹಿಸಿ ಜಯಶಾಲಿಗಳಾಗಿ ಬಂದಷ್ಟು ಸಂತೋಷವಾಗುತ್ತಿದೆ ದೇವರು ಯಾವಾಗಲೂ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಆಶೀರ್ವದಿಸಿದರು.
ಎಸ್ ಬಿ ಶೆಟ್ಟಿ ನಿರೋಗಿ ರಾಮಪ್ಪ ಶಿವಪುತ್ರಪ ಎಸ್ ನಿರ್ವಾಸ ಪವಾರ್ ಶಿವಶರಣಪ್ಪ ತಾವರಖೇಡ ಹುಣಚ್ಚಪ್ಪ ತಿಮ್ಮಯ್ಯ ಪಟ್ಟಿ ಕಲ್ಯಾಣ ಕುಮಾರ್ ಪಾಟೀಲ್ ಈ ಎಲ್ಲಾ ಯೋಧರ ಪರವಾಗಿ ಮಲ್ಲಿಕಾರ್ಜುನ್ ಮಡಿವಾಳ ಮಾತನಾಡಿ ಯುದ್ಧದಲ್ಲಿ ಭಾಗವಹಿಸಿ ಬಂದದ್ದು ಕಲ್ಯಾಣ ನಾಡಿನ ಶರಣ ಬಸವೇಶ್ವರರ ಆಶೀರ್ವಾದ ಮತ್ತು ದೇಶದ ಜನತೆಯ ಪ್ರೀತಿಯಿಂದ ಇಂದು ಈ ಸನ್ಮಾನ ಮಾಡಿಕೊಂಡಿದ್ದು ಮತ್ತೊಂದು ಯುದ್ಧ ಗೆದ್ದು ಬಂದಷ್ಟು ಸಂತೋಷವಾಗಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಗೌರವ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ನಿರೂಪಿಸಿದರು ಅಧ್ಯಕ್ಷ ಶಂಭುಲಿಂಗ ಪಾಟೀಲ್ ಬಳಬಟ್ಟಿ ವಂದಿಸಿದರು ನಗರಾಧ್ಯಕ್ಷ ಉದಯ ಪಾಟೀಲ್ ಶಿವರಾಜ್ ಪಾಟೀಲ್ ತಿಳಗೂಳ ತಾತ ಗೌಡ ಪಾಟೀಲ್ ಕೂಡಿ ಇನ್ನಿತರರಿದ್ದರು.