ಕಲಬುರಗಿ: ಜಿಲ್ಲೆಯಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಬೆಳೆ ಹಾನಿಯಾದ ಪ್ರದೇಶಗಳಿಗೆ ಜುಲೈ ೨೯ ರಿಂದ ಎರಡು ದಿನ ಪ್ರವಾಸ ಕೈಗೊಳ್ಳಲು ಜೆಡಿಎಸ್ ಕಚೇರಿಯಲ್ಲಿ ನಡೆದ ಯುವ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಜೆಡಿಎಸ್ ಮುಖಂಡ ಬಸವರಾಜ ತಡಕಲ್ ಮಾತನಾಡಿದರು.
ಜೆಡಿಎಸ್ ಯುವ ಅಧ್ಯಕ್ಷ ಅಲೀಮ ಇನಾಮದಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಮುಖಂಡ ಬಸವರಾಜ ತಡಕಲ್, ಡಿ.ಜಿ.ಸಾಗರ್, ನಾಸಿರ್ ಹುಸೇನ್ ಉಸ್ತಾದ್, ಬಸವರಾಜ ದಿಗ್ಗಾವಿ, ದೆವೇಗೌಡ ತೆಲ್ಲೂರ, ಸೈಯದ್ ಜಫರ್ ಹುಸೇನ್, ಶಾಮರಾವ್ ಸೂರನ್ ನೇತೃತ್ವದಲ್ಲಿ ಪ್ರವಾಸ ಕೈಗೊಂಡು ಅತಿವೃಷ್ಟಿ ಸಮೀಕ್ಷೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಮುಂಗಾರ ಹಂಗಾಮಿನಲ್ಲಿ ಸುರಿದ ಮಳೆಯಿಂದ ರೈತರ ಶೇ.೫೦ ರಷ್ಟು ಬೆಳೆ ಹಾನಿಯಾಗಿದೆ. ಸರಕಾರ ಈ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ರಾಜ್ಯ ಸರಕಾರ ಕೊರೊನಾ ನೆಪದಲ್ಲಿ ರೈತರನ್ನು ಕಡೆಗಣಿಸುತ್ತಿದೆ. ಹೀಗಾಗಿ ಸರಕಾರದ ಕಣ್ಣು ತೆರಸಲು ಯುವ ಜೆಡಿಎಸ್ ವತಿಯಿಂದ ಎರಡು ದಿನ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಯುವ ಅಧ್ಯಕ್ಷ ಅಲೀಮ ಇನಾಮದಾರ ಹೇಳಿದರು. ಪ್ರವಾಸದ ಬಳಿಕ ಸಮೀಕ್ಷೆಯ ವರದಿ ಸಿದ್ಧಪಡಿಸಿ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಮನೋಹರ ಪೊದ್ದಾರ, ಸುಭಾಷ ಕಾಬಾ, ಮಾಣಿಕ್ ಶಹಾಪುರಕರ್, ಶಾದಾಬ್ ಮಲ್ಲಿಕ್, ಗುರುನಾಥ ಪೂಜಾರಿ, ನಾಗರಾಜ್ ರೇವಣಕರ್, ಮಹಾನಂದ ಪಡಶೆಟ್ಟಿ, ಮಹಿಮೂದ್ ಖುರೇಷಿ, ಸುನಿತಾ ಕೋರವಾರ, ಶೇಖ ಮೈನೋದ್ದಿನ್ ಇದ್ದರು.