ಅಫಜಲಪುರ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಮುಖ್ಯ ಮಂತ್ರಿಗಳಿಗೆ ಮನವಿ

0
124

ಅಫಜಲಪುರ : ದಿಟ್ಟ ಪತ್ರಕರ್ತ ಜನಪರ ಕಾಳಜಿಯುಳ್ಳ ಚಿಂತಕ ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಮಾಡಿದ ಕಿರುಕುಳದ ಕೇಸ್ ಸರಕಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭೆ ಸರಕಾರವನ್ನು ಒತ್ತಾಯಿಸಿದೆ.

ಸ್ಥಳೀಯ ತಹಶೀಲ ಕಚೇರಿಯ ಆವರಣದಲ್ಲಿ ಸೇರಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆಯ ಹೊನ್ನಾಳಿಯಲ್ಲಿ ದಾಖಲಿಸಿದ ಕೇಸ್120/2020, ಸೆಕ್ಷನ್ 505 ಐ.ಪಿ.ಸಿ. ಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಸಂಘಟನೆಯ ಮೂಲಕ ರಾಜ್ಯದ ತುಂಬೆಲ್ಲ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷರಾದ ಬಸ್ಸಣ್ಣ ಗುಣಾರಿಯವರು ಒತ್ತಾಯ ಪಡಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ವಿಶ್ವಾರಾಧ್ಯರ ಪಾತ್ರ ತುಂಬಾ ಮಹತ್ವದಿದೆ. ಬುದ್ಧ ಬಸವ ಅಂಬೇಡ್ಕರ ಅವರು ಕಂಡ ಕನಸುಗಳನ್ನು ಪ್ರಸ್ತುತ ಸಮಾಜದಲ್ಲಿ ಜಾರಿಗೆ ತರಬೇಕೆಂದು ಅವರು ಅಹರ್ನಿಶಿ ಯತ್ನಿಸುತ್ತಿದ್ದಾರೆ ಎಂದು ಸಂಘದ ಅಮೃತರಾವ್ ಪಾಟೀಲ ಗುಡ್ಡೆವಾಡ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು.

ವಾಸ್ತವ ಸ್ಥಿತಿಯನ್ನು ಅರಿಯದೆ ಕೇವಲ ಸೈದ್ಧಾಂತಿಕ ಭಿನ್ನ ನಿಲುವುಗಳನ್ನು ಅರ್ಥ ಮಾಡಿಕೊಳ್ಳದೆ ಹೊನ್ನಾಳಿಯಲ್ಲಿ ಸತ್ಯಂಪೇಟೆಯವರ ಮೇಲೆ ಕೇಸ್ ದಾಖಲಿಸಿದ್ದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಆದ್ದರಿಂದ ಸದರಿ ಕೇಸ್ ನ್ನು ಹಿಂಪಡೆಯುವ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಸರಕಾರ ಎತ್ತಿ ಹಿಡಿಯಬೇಕೆಂದು ಮಹೇಶ ಅಲೇಗಾಂವ ಸರಕಾರವನ್ನು ಒತ್ತಾಯಿಸಿದರು.

ಒಂದು ವೇಳೆ ಸರಕಾರ ವಿಶ್ವಾರಾಧ್ಯರ ಮೇಲೆ ಮಾಡಿದ ದುರುದ್ಧೇಶ ಪೂರಿತ ಕೇಸ್ ವಾಪಸ್ ಪಡೆಯದೆ ಹೋದರೆ ರಾಜ್ಯದ ತುಂಬೆಲ್ಲ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸದಾಶಿವಪ್ಪ ಮೇತ್ರಿ ಅಭಿಪ್ರಾಯ ತಿಳಿಸಿದರು.

ಮುಖ್ಯ ಮಂತ್ರಿ ಯಡಿಯೂರಪ್ಪ ನೇತ್ರತ್ವದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ , ಸೌಹಾರ್ದಯುತವಾದ ಸಮಾಜವನ್ನು ಕಟ್ಟಲು ಬಯಸುತ್ತದೆ ಎಂದು ನಾವು ನಂಬಿದರೆ ಲಿಂಗಾಯತ ತತ್ವಗಳನ್ನು ಪ್ರಚುರಗೊಳಿಸುವ ಸತ್ಯಂಪೇಟೆಯವರ ಮೇಲೆ ಕ್ರಮಕೈಗೊಳ್ಳಲು ಪ್ರೊತ್ಸಾಹಿಸುತ್ತಿರುವುದು ನಿಜಕ್ಕೂ ಖೇದದ ಸಂಗತಿ ಎಂದು ಶಂಕ್ರಪ್ಪ ಮಣ್ಣೂರು ವಿವರಿಸಿದರು.

ಮನವಿ ಪತ್ರ ನೀಡುವವರಲ್ಲಿ ರಾಜೇಂದ್ರ ನಿರೋಣಿ, ಬಸವರಾಜ ಕೆಂಗನಾಳ, ಮಹೇಶ ಅಲೇಗಾಂವ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
0 ವರದಿಗಾರ ಅಫಜಲಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here