ಶರಣ ಸ್ಮಾರಕಗಳಲ್ಲಿ ಮೇರು ವ್ಯಕ್ತಿತ್ವದ ಅಲ್ಲಮಪ್ರಭುದೇವರು: ಶರಣ ಚರಿತೆ

0
44

ಅಲ್ಲಮಪ್ರಭುಗಳ ವಚನ, ವಿಚಾರಗಳನ್ನು ತಿಳಿದಿರುವ ನಮಗೆ ಅವರು ಮೇರು ವ್ಯಕ್ತಿತ್ವದ ಶರಣರು ಎಂಬುದು ಮನದಟ್ಟಾಗುತ್ತದೆ. ಅಲ್ಲಮಪ್ರಭು ಮತ್ತು ಸಿದ್ಧರಾಮರು ಈ ನಾಡನ್ನು ಸುತ್ತಾಡಿದಷ್ಟು ಬೇರೆ ಮತ್ತಿನ್ನಾರೂ ಸುತ್ತಿಲ್ಲ ಎಂದು ಹೇಳಬಹುದು. “ಭವನೊಲಿದು ನೆಲೆಸಿರ್ಪ ಸಜ್ಜೆ ತಾನೆಂದೆನಿಪ ಬಳ್ಳಿಗಾವಿಯಂ” ಎಂದು ಹರಿಹರ ಗುರುತಿಸಿದ್ದರೆ ಶೂನ್ಯ ಸಂಪಾದನೆಯ ಶಿವಗಣಪ್ರಸಾದಿಯವರು “ಬನವಸಿಯೆಂಬ ಗ್ರಾಮದೊಳು ಇಪ್ಪ ನಾಗವಾಸಾಧಿಪತಿಯೆಂಬ” ಎಂದಿದ್ದಾರೆ. ಘಟ್ಟಿವಾಳಯ್ಯನವರು “ಕರವೂರ ನಿರಂಕಾರ ಸುಜ್ಞಾನದೇವಿಯರ ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ? ಎಂದು ಅಭಿಪ್ರಾಯಪಡುತ್ತಾರೆ. ಅದೇನಿದ್ದರೂ ಇವರು ಅಲ್ಲಿಯೇ ಸುತ್ತಲಿನವರಿರಬೇಕು ಎಂದು ಹೇಳಬಹುದು. ತಂದೆ ನಿರಹಂಕಾರ, ತಾಯಿ ಸುಜ್ಞಾನಿ. ದೇವರ ರಂಗಭೋಗದವರಿಗೆ ಕಲಾ ತರಬೇತಿ ಕೊಡುವ ಶಿಕ್ಷಕ ಆಗಿದ್ದ. ಹೀಗಾಗಿ ಅಲ್ಲಮ ಮದ್ದಳೆ ಬಾರಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಎಂದು ವಿದ್ವಾಂಸರು ಹೇಳುತ್ತಾರೆ. ಬನವಸಿಯ ಮಧುಕೇಶ್ವರ, ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಾಲಯಗಳಲ್ಲಿ ಮದ್ದಳೆ ಬಾರಿಸುತ್ತದ್ದ ಎನ್ನವುದು ಸಹಜ ಸಂಗತಿ.

ಬಳ್ಳಿಗಾವಿಯಯಲ್ಲಿ ಕೇದಾರನಾಥ ದೇವಾಲಯದಲ್ಲೊಂದು ನೃತ್ಯ ಮಂಟಪವಿದ್ದು, ನಾಟ್ಯರಾಣಿ ಶಾಂತಲಾದೇವಿ ನೃತ್ಯ ಮಾಡಿದ ಸ್ಥಳ ಎಂದು ಗುರುತಿಸಲಾಗುತ್ತದೆ. ಪಕ್ಕದಲ್ಲಿಯೇ ಅಲ್ಲಮಪ್ರಭು ದೇವಾಲಯವಿದೆ. ಬಳ್ಳಗಾವಿ ದಾಟಿ ಉತ್ತರಕ್ಕೆ ತ್ರಿಪುರಾಂತಕೇಶ್ವರ ದೇವಾಲಯ. ಅದರೊಳಗೆ ನೃತ್ಯ ಮಂಟಪ, ಕಪ್ಪು ಹಲಗೆ ಇರುವುದನ್ನು ಕಾಣಬಹುದು. ದೇವಾಲಯದ ಉತ್ತರಕ್ಕೆ (ಮಗ್ಗುಲಿಗೆ) ಅಲ್ಲಮಪ್ರಭುವಿನ ಮನೆ ಇತ್ತು ಎಂದು ಹೇಳುತ್ತಾರೆ. ಬಳ್ಳಿಗಾವಿ ದಾಟಿದರೆ ಬರುವ ಮಾಳಗೊಂಡನಕೊಪ್ಪದಲ್ಲಿ ಅಲ್ಲಮನಿಗೆ ಲಿಂಗ ಕರುಣಿಸಿದ ಗುರು ಅನಿಮಿಷಾರಣ್ಯ ವನ ಇದೆ. ಒಳಗಡೆ ಅನಿಮಿಷನ ಗದ್ದುಗೆಯ ಪಕ್ಕದಲ್ಲಿಯೇ ಗೊಗ್ಗಯ್ಯನ ಸಮಾದಿ ಇದೆ. ಪಟ್ಟದಕಲ್ಲಿನ ಅರಸ ವಸುಧೀಶ (ಅನಿಮಿಷ) ಆದ್ಯಾತ್ಮಿಕ ಜೀವಿಯಾಗಿದ್ದ. ಲಿಂಗಮುದ್ರೆ ಇರುವ ನಂದಿ ಕಂಡಾಗಿನಿಂದ ಲಿಂಗ ನೋಡುತ್ತ ಮುಂದೆ ಹೋದಾಗ ನಂದಿಯಿಂದ (ಗುರುವಿನಿಂದ) ಲಿಂಗವೇ ಅವರಿಗೆ ಸಿಕ್ಕಿತು. ಅದನ್ನು ಅಲ್ಲಮನಿಗೆ ಕರುಣಿಸಿದ ಎಂದು ಹೇಳಲಾಗುತ್ತಿದೆ.

ಬಳ್ಳಿಗಾವಿ ಸಮೀಪದ ಅನಿಮಿಷ್ಯಾರಣ್ಯ ದೇವಸ್ಥಾನ
Contact Your\'s Advertisement; 9902492681

ಹರಿಹರನ ಪ್ರಕಾರ ಅಲ್ಲಮನ ಹೆಂಡತಿ ಮಾಯಾದೇವಿ (ಕಾಮಲತೆ) ಲಿಂಗೈಕ್ಯವಾದ ನಂತರ ದುಃಖದಲ್ಲಿ ಊರ ಹೊರಗೆ ಬಂದು ಕಾಲಿನ ಹೆಬ್ಬಿಟ್ಟಿನಿಂದ ಕೆದರಿದಾಗ ದೊಡ್ಡ ದೇವಾಲಯ ಇತ್ತು. ಅರಸನಿಗೆ ವಿಷಯ ತಿಳಿಸಿದಾಗ ಈ ದೇವಾಲಯ ಒಳಗೆ ಪ್ರವೇಶ ಮಾಡಲು ಎಲ್ಲರೂ ಹೆದರಿದರು. ಹೆಂಡತಿಯ ಸಾವಿನಿಂದ ಮನನೊಂದ ಅಲ್ಲಮ ದೇವಾಲಯ ಪ್ರವೇಶಿಸಿದ ಕೂಡಲೇ ಲಿಂಗಕ್ಕೆ ಕಂಡು ನಮಿಸಿ ಮಗ್ಗಲು ಕಣ್ಣು ಹಾಯಿಸಿದಾಗ ಅನಿಮಿಷರು ಇಷ್ಟಲಿಂಗ ಪೂಜೆಯಲ್ಲಿ ಕುಳಿತಿದ್ದರು. ಅಲ್ಲಮಪ್ರಭು ಕೈಯೊಡ್ಡಲು ಆ ಲಿಂಗ ಅಲ್ಲಮನ ಕೈಗೆ ಬಂದಿತು ಎಂದು ಹೇಳುತ್ತಾರೆ. ಅನಿಮಿಷನಿಂದ ಲಿಂಗ ಪಡೆದ ಆಧ್ಯಾತ್ಮದ ಎತ್ತರಕ್ಕೇರಿದ ಅಲ್ಲಮರು ತಮ್ಮ ವಚನವೊಂದರಲ್ಲಿ “ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ” ಹೇಳಿರುವುದನ್ನು ನೋಡಿದರೆ ತಮ್ಮ ಸುತ್ತಾಟದಲ್ಲಿ ಸಂಪರ್ಕಕ್ಕೆ ಬಂದವರನ್ನು ಬಸವಕಲ್ಯಾಣಕ್ಕೆ ಕರೆ ತಂದರು ಎಂದು ಹೇಳಬಹುದು.

ಮಾಳಗೊಂಡನಕೊಪ್ಪದಿಂದ ೨ ಕಿ. ಮೀ ದೂರದ ಶಿವಪುರದಲ್ಲಿ ಅಲ್ಲಮಪ್ರಭುವಿನ ಗುಡಿ, ಬಂಕನಾಥನ ಸಮಾದಿ, ಪತ್ರಿವನ ಇದೆ. ಅನಿಮಿಷ ಮತ್ತು ಗೋರಕ್ಷ ಈ ಇಬ್ಬರ ಊರು ಪಟ್ಟದಕಲ್ಲು ಆಗಿರಬಹುದು. ಏಕೆಂದರೆ ಅಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿ ಗೋರಕ್ಷ ಇರುತ್ತಿದ್ದ ಎಂದು ಹೇಳಾಗುತ್ತಿದೆ.

ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ (ಬಿ) ಗೋರಕ್ಷ ದೇವಾಲಯವಿದೆ. ಇಲ್ಲಿಯೇ ಆತ ಉಳಿದಿರಬೇಕು. ಗೋಸಾಯಿಗಳಿರುವ ಮಹಾದೇವನ ಮಂದಿರ ಕೂಡ ಇದೆ. ಮಧುಕೇಶ್ವರದ ಅರಸ ಸೋದೆ ಸದಾಶಿವರಾಯರು ಕಟ್ಟಿಸಿದ ಮಧುಕೇಶ್ವರದಲ್ಲಿ ನೃತ್ಯ ಮಂಟಪವಿದ್ದು, ಗೋಡೆಯ ಮೇಲೆ ನೃತ್ಯ ಭಂಗಿಯ ಉಬ್ಬು ಶಿಲ್ಪ, ಶಿವೋತ್ಸವ ಮಂಟಪದ ಮೇಲೆ ೧೧ ಶರಣರ ಉಬ್ಬು ಶಿಲ್ಪಗಳನ್ನು ಕೆತ್ತಿರುವುದನ್ನು ಕಾಣಬಹುದು. ಊರ ಹೊರಗೆ ಅಲ್ಲಮಪ್ರಭುಗಳ ಎರಡು ಗುಡಿಗಳಿವೆ. ಆ ಊರೊಳಗೆ ಹೊಸದಾಗಿ ಬಸವೇಶ್ವರ ದೇವಾಲಯ ನಿರ್ಮಾಣವಾಗಿದೆ.

ಪತ್ರಿವನ

ಇಲ್ಲಿ ಅಕ್ಕಮಹಾದೇವಿಯ ಶಿಲ್ಪ ಕೂಡ ಇದೆ. ಇದಲ್ಲದೆ ಬೀದರ್, ಕಲಬುರಗಿ, ಬಸವಕಲ್ಯಾಣ, ಚಿಟಗುಪ್ಪ, ಗದಗ, ಕಣವಿ, ಕುರ್ತಕೋಟಿ, ರಾಯಚೂರಿನ ಮಸರಕಲ್ಲು, ಗೂಗಲ್, ಮೊರಟ, ಜಮಖಂಡಿ, ಹುಲ್ಯಾಳ, ತೇರದಾಳ, ಕಂಕನವಾಡಿ ತಾಲ್ಲೂಕಿನಲ್ಲಿ ವಿಶೇಷ ಸ್ಮಾರಕಗಳು ಸಿಗುತ್ತವೆ.

ಸ್ಥಳ: ಕಲ್ಬುರ್ಗಿ ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here