ಚಿಂಚೋಳಿ: ಅನುಯಾಯಿಗಳಾದ,ಪತ್ರಕರ್ತರು,ಪ್ರಗತಿಪರ ಚಿಂತಕರು ಆದ ವಿಶ್ವಾರಾಧ್ಯರ ಪೋಸ್ಟ್ ಅನ್ನು ಸರಿಯಾಗಿ ಗ್ರಹಿಸದೆ ಅವರ ಮೇಲೆ ದುರುದ್ದೇಶಪೂರಕವಾಗಿ ಕೆಲವರು ದೂರು ದಾಖಲಿಸಿರುವುದು ಅಕ್ಷಮ್ಯ.ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಇದು…ಸಂವಿಧಾನವು( Art 51A(h,) ವೈಜ್ಞಾನಿಕ ದೃಷ್ಟಿಕೋನವನ್ನ ಜನರಲ್ಲಿ ಬೆಳೆಸಲು ಆಶಯ ಹೊಂದಿದೆ ಅದರ ಪ್ರಕಾರ ಹಲವಾರು ಬಸವಾನುಯಾಗಿಗಳು ಮೌಢ್ಯದ ಬಗ್ಗೆ ಜಾಗೃತಿ ಮೂಡಿಸಲು ಅಭಿವ್ಯೆಕ್ತಿ ಅಡಿ ತಮ್ಮ ಅನಿಸಿಕೆ ದಾಖಲಿಸಿದ್ರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ಮೇಲೆ ವಿನಾಕಾರಣ ದೂರು ದಾಖಲಿಸುವುದು ,ಅವರ ಮೇಲೆ ಬೇರೆತರಹದ ದಾಳಿ ಮಾಡ್ತ ಬಂದಿರುವುದನ್ನು ಕಂಡಿದ್ದೇವೆ ಎಂದು ಕಾಂಗ್ರೇಸ ಯುವ ಮುಖಂಡ ವಿಲಾಸ ಗೌತಂ ನಿಡಗುಂದಾ ತಿಳಿಸಿದರು.
ಈಗ ಅದರ ಮುಂದುವರೆದ ಭಾಗವೇನೊ ಎಂಬಂತೆ ಶರಣ ವಿಶ್ವರಾಧ್ಯ ಸತ್ಯಂಪೇಟೆಯವರ ವಿರುದ್ದ ಸಂಚು ನಡೆಸಲಾಗ್ತಿದೆ.ನಾಡಿನ ಬಸವಾನುಯಾಯಿಗಳು ,ಪ್ರಜಾಪ್ರಭುತ್ವವಾದಿಗಳು ,ಇದನ್ನು ಅಲ್ಲಲ್ಲಿ ಖಂಡಿಸ್ತ ಇದ್ದಾರೆ. ಕೂಡಲೆ ಆ ದೂರನ್ನು ಸರಕಾರ ಹಿಂಪಡೆಯಬೇಕೆಂದು ವಿಲಾಸ ಗೌತಂ ನಿಡಗುಂದಾ ಆಗ್ರಹಿಸಿದ್ದಾರೆ.