ಪಠ್ಯಕ್ರಮದಿಂದ ದೇಶಪ್ರೇಮಿಗಳ ಪಾಠ ಕೈಬಿಟ್ಟ ಸರ್ಕಾರ ಸಂಕುಚಿತ ಭಾವನೆಬಿತ್ತುವ ಹುನ್ನಾರ :ಲಿಂಗರಾಜ್ ಮಾಸ್ಟರ್

0
219
  • ರಾಜು ಮುದ್ದಡಗಿ

ಜೇವರ್ಗಿ : ಕೇಂದ್ರದಲ್ಲಿನ ಆಡಳಿತ ನಡೆಸುವ ಮೋದಿ ಸರ್ಕಾರ ಹಾಗೂ ರಾಜ್ಯ ದಲ್ಲಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿದೆ.

ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿಗಳ ತ್ಯಾಗ-ಬಲಿದಾನದ ಹೋರಾಟಕ್ಕೆ ಗ್ರಹಣ ಹಿಡಿಸುತ್ತಿದ್ದಾರೆ. ಅಲ್ಲದೆ ಇವರು ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ! ಎಂದು ಯುವ ಹಾಲಮತ ಖಂಡರಾದ ಕರ್ನಾಟಕ ಹಾಲುಮತ ಜಾಗೃತಿ ಪ್ರತಿಷ್ಠಾನದ ತಾಲೂಕ ಅಧ್ಯಕ್ಷರಾದ ಲಿಂಗರಾಜ ಮಾಸ್ಟರ್ ಕಿಡಿಕಾರಿದ್ದಾರೆ.

Contact Your\'s Advertisement; 9902492681

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇವರು ರಾಷ್ಟ್ರಪ್ರೇಮಿ ಮಹಾನ್ ದೇಶಭಕ್ತರುಗಳ ಕೊಡುಗೆಗಳು,ಆದರ್ಶಗಳು ವಿದ್ಯಾರ್ಥಿ ದಿಶೆಯಲ್ಲಿ ಕಲಿಸುವುದು ಅಗತ್ಯವಾಗಿದೆ. ಆದರೆ ಇಂತಹ ವಿಚಾರದಲ್ಲಿ ಪಠ್ಯಕ್ರಮ ರಚನಾ ಸಮಿತಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ಪರಾಮರ್ಶೆಗೆ ಒಳಪಡಿಸದೆ ಸರಕಾರವು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಶಾಲೆಯಲ್ಲಿರುವ ಮಕ್ಕಳು ದೇಶಭಕ್ತರ ಆದರ್ಶ ಜೀವನವನ್ನು ಅನುಕರಿಸಲು ಸಹಾಯಕವಾಗುತ್ತವೆ. ಆದರೆ ಕೆಚ್ಚೆದೆಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ತೋರಿದ ಪರಾಕ್ರಮವನ್ನು ಇತಿಹಾಸ ಸಾರಿಹೇಳುತ್ತದೆ. ಅದನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಅಲ್ಲದೆ ಮೈಸೂರು ಹುಲಿ ಎಂದೇ ಖ್ಯಾತಿ ಪಡೆದ ಟಿಪ್ಪುಸುಲ್ತಾನ್ ತಮ್ಮ ಇಡೀ ಜೀವನವನ್ನು ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದು ಸೇರಿದಂತೆ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರಳಾದ ರಾಣಿ ಅಬ್ಬಕ್ಕದೇವಿ ವಿಷಯವನ್ನು ಪಠ್ಯಕ್ರಮದಿಂದ ಕೈಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಎಂದು ಖಂಡಿಸಿದ್ದಾರೆ.

ಈ ಮಹಾನ್ ಐತಿಹಾಸಿಕ ಸ್ವತಂತ್ರ ಸಂಗ್ರಾಮದ ಸೇನಾನಿಗಳ ದೇಶಪ್ರೇಮ, ಶೌರ್ಯ ,ತ್ಯಾಗ ಸೇರಿದಂತೆ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕಿದೆ.
ಕೋವಿಡ್ 19 ರ ಸಂಕಷ್ಟದ ಹಿನ್ನೆಲೆಯಲ್ಲಿ ಸರಕಾರವು ನಿರಂಕುಶವಾಗಿ ನಿರ್ಣಯವನ್ನು ತೆಗೆದುಕೊಂಡು ಅಗತ್ಯ ವಿಷಯಗಳಿಗೆ ಕಡಿವಾಣ ಹಾಕುವ ಮೂಲಕ ಪಠ್ಯಕ್ರಮವನ್ನು ಮೊಟಕುಗೊಳಿಸಿ ರುವುದು ಸರಿಯಲ್ಲ. ಈ ಕುರಿತು ಕೂಡಲೇ ಪರಾಮರ್ಶೆ ನಡೆಸಿ ದೇಶಭಕ್ತರ ಚರಿತ್ರೆಯನ್ನು ಇತಿಹಾಸದಲ್ಲಿ ಉಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here