ಶಹಾಪುರ: ಕೋರೊನಾ ಮಹಾಮಾರಿ ಕೋವಿಡ -19 ಜಗತ್ತಿನಲ್ಲಿ ತಾಂಡವ ಆಡುತ್ತಿರುವುದರಿಂದ ಜನರು ಭಯ ಭೀತಿಗೊಂಡಿದ್ದಾರೆ, ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬುವುದು ಅತ್ಯವಶ್ಯಕವಾಗಿದೆ ಎಂದು ಶಿಲ್ಪಾ ಪಾಟೀಲ್ ಹೇಳಿದರು.
ಸಗರ ಗ್ರಾಮದ ಶ್ರೀ ಮೌನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ದಾವಣಗೆರೆ ಶ್ರುತಿ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಹಮ್ಮಿಕೊಂಡಿರುವ ಕೊರೊನಾ ಜಾಗೃತಿ ಹಾಗೂ ನೀರು,ನೈರ್ಮಲ್ಯ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.
ಮಾನಯ್ಯ ಆಚಾರ್ಯ ಕಂಬಾರ ಮಾತನಾಡಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋರೋನಾ ಮುಕ್ತ ದೇಶವನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು.
ಡಿ.ವೆಂಕಟೇಶ್ ಮತ್ತು ಕಲಾ ತಂಡದವರಿಂದ ಜಾಗೃತಿ ಹಾಡುಗಳ ಹಾಗೂ ಬೀದಿ ನಾಟಕಗಳ ಮೂಲಕ ಕರೋನಾ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸಭಾಂಗಣದಲ್ಲಿ ನೆರೆದಿದ್ದ ಗ್ರಾಮೀಣ ಭಾಗದ ಜನರಲ್ಲಿ ಕೊಂಚ ಜಾಗೃತಿ ಬಗ್ಗೆ ಅರಿವು ಮೂಡಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಅನ್ನಪೂರ್ಣ,ಸಗರ ಗ್ರಾಮ ಪಂಚಾಯಿತಿ ಪಿಡಿಒ ಅಣ್ಣಾರಾಯ ರೂಗಿ, ಮಾನಯ್ಯ ವಿಶ್ವಕರ್ಮ, ಕಲಾವಿದರಾದ ಚೇತನ್ ಜೆ, ಶ್ರೀನಿವಾಸ್ ವಿ,ಮಾಂತೇಶ್ ಎನ್,ರಾಮು,ಆಂಜನೇಯ್ಯ ಟಿ, ಹಾಗೂ ಇತರರು ಉಪಸ್ಥಿತರಿದ್ದರು.