ಪ್ರಾರ್ಥನೆ ಕೇಲವ 50 ಜನರಿಗೆ ಮಾತ್ರ ಅವಕಾಶ: ಡಿವೈಎಸ್ಪಿ ವೀರಭದ್ರಯ್ಯ

0
51

ಚಿಂಚೋಳಿ: ದೇಶಾದ್ಯಂತ ಕೊರೊನಾ(ಕೋವಿಡ್ 19) ವೈರಸ್ ಹರಡುತ್ತಿದ್ದ ಕಾರಣ ಈ ಬಾರಿ ಹಬ್ಬ ಸಾದಾರಣವಾಗಿ ಆಚರಿಸುವ ಮೂಲಕ ಕೊರೊನಾ ವೈರಸ್ ವಿರುದ್ದ ಹೋರಾಡಲು ಕೈಜೋಡಿಸಬೇಕು ಎಂದು ಡಿವೈಎಸ್ಪಿ ವೀರಭದ್ರಯ್ಯ ತಿಳಿಸಿದರು.

ಅವಳಿ ಪಟ್ಟಣದ ಚಂದಾಪೂರ ಹಾಗೂ ತಾಲೂಕಿನ ನಿಮಾಹೊಸಳ್ಳಿ, ಐನೊಳ್ಳಿ, ನಾಗಾಯಿದಲಾಯಿ, ಚಿಮ್ಮನಚೋಡ, ಪೋಲಕಪಳ್ಳಿ ಗ್ರಾಮಗಳ ಮಸೀದಿಗಳಗೆ ಬೇಟಿ ನೀಡಿ ಆಯಾ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ನಂತರ ಪತ್ರಕರ್ತರೋಡನೆ ಮಾತನಾಡಿದ ಅವರು, ಪ್ರತಿ ವರ್ಷ ವಿಜ್ರಬಣೆಯಿಂದ ಎಲ್ಲಾ ಹಬ್ಬಗಳು ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಸೊಂಕು ಹರಡುತ್ತಿದ್ದ ಕಾರಣ ಸಂಕ್ಷೀಪ್ತವಾಗಿ ಆಚರಿಸುವುದು ಆನಿವಾರ್ಯವಾಗಿದೆ ಎಂದರು.

Contact Your\'s Advertisement; 9902492681

ದೇಶದಲ್ಲಿ ದಿನೆ ದಿನೆ ಕೊರೊನಾ ವೈರಸ್ ಹರಡುತ್ತಿರುವುದು ತಡೆಯಲು ನಾವು ನೀವು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತಕ ಕಾಯ್ದುಕೊಂಡು ಹಬ್ಬ ಆಚರಿಸಬೇಕು. ಪ್ರಾರ್ಥನೆಗಾಗಿ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ. ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹಬ್ಬ ಆಚರಿಸುವ ಮೂಲಕ ಕೊರೊನಾ ವೈರಸ್ ವಿರುದ್ದ ಹೋರಾಟ ಮಾಡಲು ಕೈಜೋಡಿಸಿ ಎಂದರು.

ಸಿಪಿಐ ಮಹಾಂತೇಶ ಪಾಟೀಲ, ಪಿಎಸೈ ರಾಜಶೇಖರ ರಾಠೋಡ, ಮುಖಂಡರಾದ ಕೆಮ್ ಬಾರಿ, ಅಬ್ದುಲ್ ಬಾಸೀತ್, ಮಸೀದಿಯ ಮುಖ್ಯಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here