ರಾಜ್ಯಕ್ಕೆ ಸಿಗಬೇಕಿದ್ದ ಜಿಎಸ್ ಟಿ ಪರಿಹಾರ ಕೇಂದ್ರ ನಿರಾಕರಣೆ: ಶಾಸಕ ಖರ್ಗೆ ತೀವ್ರ ಟೀಕೆ

0
38

ಕಲಬುರಗಿ: ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ರಾಜ್ಯದ ಪಾಲಿನ ಜಿಎಸ್ ಟಿ ಪರಿಹಾರ‌ದ ಎರಡನೆಯ ಕಂತು ನೀಡಲು ಕೇಂದ್ರ ಸರಕಾರ ನಿರಾಕರಣೆ ಮಾಡಿದೆ. ರಾಜ್ಯದಿಂದ ಆಯ್ಕೆಯಾಗಿ ಹೋದ 25 ಬಿಜೆಪಿ ಸಂಸದರಿಗೆ ಈ ಕುರಿತು ಪ್ರಶ್ನೆ ಮಾಡಲು ಧೈರ್ಯವಿಲ್ಲವೇ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕೆಮಾಡಿದ್ದಾರೆ.

ತಮ್ಮ ಸರಣಿ ಟ್ವೀಟ್ ಮೂಲಕ ಕೇಂದ್ರ ಸರಕಾರದ‌ ನಿಲುವನ್ನು ಖಂಡಿಸಿರುವ ಶಾಸಕರು ಜಿಎಸ್ ಟಿ ಪರಿಹಾರ ಮಾತ್ರವಲ್ಲದೇ, 15ನೇ ಹಣಕಾಸು ಆಯೋಗದಿಂದ ರಾಜ್ಯದ ತೆರಿಗೆ ಪಾಲಿನಲ್ಲಿ 9,000 ಕೋಟಿ ರೂ. ಖೋತಾ‌ ಮಾಡಿದೆ ಹಾಗೂ ತನ್ನ ಪ್ರಾಯೋಜಿತ ರಾಜ್ಯ ಯೋಜನೆಗಳಿಗೂ ಕೂಡಾ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ ಇದು ರಾಜ್ಯದ ಅಭಿವೃದ್ದಿಗೆ ಅಡ್ಡಗಾಲಾಗಿ ಪರಿಣಮಿಸಿದೆ. ಇದನ್ನು ಪ್ರಶ್ನಿಸಬೇಕಿರುವ ಬಿಜೆಪಿಯವರು ಸುಮ್ಮನಿರುವುದೇಕೆ ? ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾವೊಬ್ಬ ಸಂಸದರಿಗೆ ಇಲ್ಲವೇ? ಎಂದು ಕುಟುಕಿದ್ದಾರೆ.

Contact Your\'s Advertisement; 9902492681

ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು “ದೆಹಲಿ ಪೆರೇಡ್” ಮಾಡುವ ಬಿಜೆಪಿ ನಾಯಕರಿಗೆ ರಾಜ್ಯದ ಹಕ್ಕಿಗಾಗಿ ಹೋರಾಡೋಕೆ ಪುರಸೊತ್ತಿಲ್ವಾ? ಎಂದು ಪ್ರಶ್ನಿಸಿರುವ ಶಾಸಕರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಈ ಬಗ್ಗೆ ತುಟಿಕ್ ಪಿಟಿಟ್ ಎನ್ನದೇ, ಸರ್ಕಾರ ಮತ್ತು ಬಿಜೆಪಿ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಜರಿದಿದ್ದಾರೆ.

ಪ್ರಧಾನಿ ಮೋದಿಯರ ಆತ್ಮನಿರ್ಭರ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಿಯಾಂಕ್ ಖರ್ಗೆ ಅವರು ” ನಮಗೆ ಸಲ್ಲಬೇಕಾದ ಹಣ ನೀಡದೇ, ರಾಜ್ಯವನ್ನ ಬೀದಿಯಲ್ಲಿ ಬಿಡುವುದೇ ಆತ್ಮನಿರ್ಭರತೆಯಾ ” ? ಎಂದು ವ್ಯಂಗ್ಯವಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here