ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕೇಸ್ ವಾಪಸ್ ಪಡೆಯಲು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ

0
37

ಕೊಪ್ಪಳ: ಶರಣ ಚಿಂತಕ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆಯವರ ವಿರುದ್ಧ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ಸಗರ ನಾಡಿನ ಚಿಂತಕರು ಶರಣ ಸಾಹಿತಿಗಳಾದ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆ ಜಿಲ್ಲೆಯ ಕೇ.ನಂ.೧೨೦-೨೦೨೦ ,೫೦೫೦ ಐ.ಪಿ.ಸಿ. ಕಲಂ ಅಡಿಯಲ್ಲಿ ಕೇಸ್ ದಾಖಲು ಮಾಡಿರುತ್ತಾರೆ. ಇದು ನಿಜಕ್ಕೂ ದುರುದ್ದೇಶ ಮತ್ತು ಪೂರ್ವಾಗ್ರಹ ದೋಷಪೂರಿತ ದೂರಾಗಿದೆ. ವಾಸ್ತವಾಗಿ ಇದರಲ್ಲಿ ಯಾವುದೆ ಹುರುಳಿಲ್ಲ. ಅದರಂತೆ ಸಿದ್ಧರಾಮ ಶಟಕಾರ ಅವರ ವಿರುದ್ಧವೂ ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಬಲವಾಗಿ ಖಂಡಿಸಿದರು.

Contact Your\'s Advertisement; 9902492681

ಪ್ರಸ್ತುತವಾಗಿ ವಿಶ್ವಾರಾಧ್ಯ ಸತ್ಯಂಪೇಟೆ ರಾಜ್ಯ ಮಟ್ಟದ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿಯಾಗಿದ್ದು ನಾಡಿನಾದ್ಯಂತ ಬುದ್ದ ಬಸವ ಅಂಬೇಡ್ಕರ ಅವರ ತತ್ವಗಳನ್ನು ಮುಂದಿಟ್ಟುಕೊಂಡು ಪ್ರತಿಯೊಂದು ಸಮಾಜದವರನ್ನು ಸಮಾಜದಲ್ಲಿ ಕೂಡಿ ಬದಕಲು ಶ್ರಮವಹಿಸುತ್ತಿದ್ದಾರೆ. ಮತ್ತು ಸಾಕಷ್ಟು ಪ್ರಗತಿಪರವಾದ ಚಿಂತನಾತ್ಮಕ ಬರಹಗಳನ್ನು ಬರೆದು ಜನ ಸಾಮಾನ್ಯರಲ್ಲಿ ನೈಜ ಇತಿಹಾಸ ತಿಳಿಸಿ, ಸಂವಿಧಾನ್ಮಕವಾದ ಚಿಂತನೆಗಳನ್ನು ಬರಹಗಳ ಮೂಲಕ ವ್ಯಕ್ತ ಪಡಿಸಿ, ಜನ ಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಕೆಲವರು ಇದನ್ನು ಹತ್ತಿಕ್ಕುವ ದೃಷ್ಟಿಯಿಂದ ಅವರ ಚಿಂತನೆಗಳನ್ನು ಮೂಲೆಗೆ ತಳ್ಳಬಯಸಿದ್ದಾರೆ. ಮೂಲಭೂತವಾದಿಗಳ ಕೆಂಗಣ್ಣು ಸತ್ಯಂಪೇಟೆಯವರ ಮೇಲೆ ಬಿದ್ದು ದೂರು ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೊನ್ನಾಳಿಯ ರಾಂಪುರ ಮಠಾಧೀಶರ ಕುರಿತ ಅವೈಜ್ಞಾನಿಕ ನಿಲುವುಗಳನ್ನು ಖಂಡಿಸಿದ್ದರು. ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ವಿಷಾದ ಕೂಡ ವ್ಯಕ್ತಪಡಿಸಿದ್ದರು. ಇದು ಅಲ್ಲಿಗೆ ಮುಗಿಯುವ ವಿಷಯವಾಗಿತ್ತು. ಅವರ ಬರಹದಲ್ಲಿ ಯಾವುದೇ ನಂಜು, ದ್ವೇಷ ಇರಲಿಲ್ಲ. ಆದರೆ ಬಸವಣ್ಣನವರ ವಿಚಾರಗಳನ್ನು ಪ್ರಚುರಪಡಿಸುವ ಇಂತಹ ಪ್ರಗತಿಪರರು ಮತ್ತು ಬಸವಭಕ್ತರ ವಿರುದ್ಧ ಆಗಾಗ ಕೇಸ್ ಹಾಕುವ ಮೂಲಕ ಸಮಾಜದಲ್ಲಿ ಶಾಂತಿ ಕದಡುತ್ತಿರುವುದು ದುರಂತದ ಸಂಗತಿಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದ ಶ್ರೀ ವಿಶ್ವೇಶ್ವರಯ್ಯ ಅವರ ಕುರಿತು ಸೈದ್ಧಾಂತಿಕವಾಗಿ ಬರೆದ ಬರಹವನ್ನು ಅನಾವಶ್ಯಕವಾಗಿ ದೊಡ್ಡದು ಮಾಡಿ ಗೊಂದಲ ಎಬ್ಬಿಸುತ್ತಿದ್ದಾರೆ. ವಿಶ್ವಾರಾಧ್ಯ ಸತ್ಯಂಪೇಟೆಯವನ್ನು ಪೇಚಿಗೆ ಸಿಲುಕಿಸಿ ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಸರಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ದಾಖಲಾಗಿರುವ ಕೇಸ್ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆಯಲ್ಲಿ ಹನುಮೇಶ ಕಲ್ಮಂಗಿ, ಶರಣಬಸವನಗೌಡ ಪಾಟೀಲ್, ಗವಿಸಿದ್ದಪ್ಪ ಕೊಪ್ಪಳ, ಗುಡವಪ್ಪ ಹಡಪದ, ಶೇಕರ್ ಇಂಗಳದಡ್ಡ, ಸೇರಿದಂತೆ ಮುಂತಾದವರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here