ಮಾನವೀಯತೆ ಮೈಗೂಡಿಸಿಕೊಂಡರೆ ವೈದ್ಯರ ಸೇವೆ ಸಾರ್ಥಕ – ಮೇಕಿನ್

0
52

ಶಹಾಬಾದ:ಸ್ವಾರ್ಥ, ಅಹಂಕಾರ ದೂರವಿಟ್ಟು ಮಾನವೀಯತೆ ಮೈಗೂಡಿಸಿಕೊಂಡಾಗ ಮಾತ್ರ ವೈದ್ಯರ ಸೇವೆ ಸಾರ್ಥಕವಾಗಲಿದೆ ಎಂದು ಚಿತ್ತಾಪೂರ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸುರೇಶ ಮೇಕಿನ್ ಹೇಳಿದರು.
ಅವರು ಶುಕ್ರವಾರ ನಗರದ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ಮತ್ತು ಸಿಬ್ಬಂದಿಗಳಿಂದ ಆಯೋಜಿಸಲಾದ ವೈದ್ಯಾಧಿಕಾರಿ ಡಾ.ಪರಮೇಶ್ವರ.ಎಮ್.ಸಜ್ಜನ್ ಅವರ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿ ಸರಕಾರಿ ನೌಕರನಿಗೆ ನಿವೃತ್ತಿ ಅನಿವಾರ್ಯ.ಯಾವುದೇ ಇಲಾಖೆಯಲ್ಲಿ ಮುಖ್ಯಸ್ಥರು ತಮ್ಮ ಕೆಲಸದಲ್ಲಿ ಯಶಸ್ವಿಯಾಗಬೇಕಾದರೆ ಮಾನವೀಯತೆ ಹಾಗೂ ಸರಳತೆ ಇರಬೇಕು. ಈ ಗುಣಗಳಿಂದಲೇ ಡಾ.ಸಜ್ಜನ್ ಅವರು ಒಂದೇ ಸ್ಥಳದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ನಿರ್ವಹಿಸಿದ್ದಾರೆ.ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪರಮೇಶ್ವರ ಸಜ್ಜನ್, ಶಹಾಬಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳು, ವೈದ್ಯರು ಹಾಗೂ ನಗರದ ನಾಗರಿಕರ ಸಹಕಾರವೇ ಕಾರಣ.ಇಲ್ಲಿನ ಎರಡು ದಶಕಗಳ ಕಾಲ ಮಾಡಿದ ಸೇವೆ ಎಂದಿಗೂ ಮರೆಯಲಾಗದು ಎಂದು ಹೇಳಿದರು.
ಶ್ರೀಮತಿ ಸರಸ್ವತಿ ಪರಮೇಶ್ವರ ಸಜ್ಜನ್,ಡಾ.ಅಬ್ದುಲ್ ರಹೀಮ್, ಡಾ.ಸಂಧ್ಯಾ ಡೆಂಗೆ, ಡಾ.ಅಶ್ವಿನಿ ನಿಡಗುಂದಿ, ಮೋಹನ ಗಾಯಕವಾಡ, ಸಂಜಯ ರಾಠೋಡ, ಯುಸೂಫ ನಾಕೇದಾರ, ಶಿವಕುಮಾರ ಅಲ್ಲೂರ್, ಖಾಜಾ ನಿಸಾಲೋದ್ದಿನ್, ನಸಿರೋದ್ದಿನ್,ಜಯಶ್ರೀ,ರಾಹುಲ್, ಸಂತೋಷ ಸಲಗರ, ಶಶಿಕಾಂತ ಭರಣಿ, ರಮೇಶ ಕುಲಕರ್ಣಿ, ಜಗನ್ನಾಥ.ಎಸ್.ಹೆಚ್, ರಾಘವೇಂದ್ರ.ಎಮ್.ಜಿ, ಗಣಪತರಾವ ಮಾನೆ, ಸಿದ್ದು ಚೌಧರಿ ಇತರರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here