ಕಲಬುರಗಿ ವಿಮಾನ ನಿಲ್ದಾಣಕ್ಕೆ 6 ಕೋಟಿ ರೂ. ಅಗ್ನಿಶಾಮಕ ವಾಹನ: ಸಂಸದ ಡಾ. ಜಾಧವ್ ರಿಂದ ಸಮರ್ಪಣೆ

0
45

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ 6 ಕೋಟಿ ರೂಪಾಯಿ ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆಯಾಗಿದೆ. ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರು ಇಂದು ವಿಮಾನ ನಿಲ್ದಾಣದ ಸೇವೆಗೆ ಇದನ್ನು ಸಮರ್ಪಣೆ ಮಾಡಿದರು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರಿಯಾ ದೇಶದಿಂದ ರೊಸೆನ್ ಬೌರ್ (ROSENBAUER) ಎಂಬ ವೊಲ್ವೋ ಕಂಪೆನಿಯ ಈ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದೆ.

Contact Your\'s Advertisement; 9902492681

ಅತಿಹೆಚ್ಚು ಉಷ್ಣಾಂಶ/ ಶೀತ/ಆರ್ದ್ರತೆ, ಹೊಗೆ, ಧೂಳುಮಯದಂತಹ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಚಿಮುಕಿಸುವ ಶಕ್ತಿ ಇದಕ್ಕಿದೆ. ಟ್ಯಾಂಕರ್ 6000 ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3000 ಲೀಟರ್ ಹೊರಚಿಮ್ಮಿಸಿ,ಬೆಂಕಿಯ ಜ್ವಾಲೆಗಳನ್ನು ಶಮನಗೊಳಿಸಲಿದೆ.

800 ಲೀಟರ್ ನೊರೆ ( ರಾಸಾಯನಿಕ ಮಿಶ್ರಿತ) ಟ್ಯಾಂಕರನ್ನು ಕೂಡ ಒಳಗೊಂಡಿದೆ. ಅಂದರೆ ತೈಲಗಾರ , ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತಿವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಬಳಸುವ ನೊರೆ ಇದಾಗಿದೆ.

ಒಮ್ಮೆಗೆ ಇಡೀ ಅಗ್ನಿ ಅವಘಡ ಪ್ರದೇಶವನ್ನು ನಿಯಂತ್ರಿಸುವ ಹಾಗೂ ವಿಮಾನದ ರನ್ ವೇ ಗಳಲ್ಲಿ ಚಲಿಸುತ್ತಲೇ ಕಾರ್ಯಾಚರಿಸುವಂತಹ ಆನೆಬಲ ಇದಕ್ಕಿದೆ ಎಂದು ಸಂಸದ ಡಾ ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ್ ರಾವ್, ರಾಜ್ಯ ಅಗ್ನಿಶಾಮಕ ಇಲಾಖೆ ಅಧಿಕಾರಿ ಮಧು ರಾಠೋಡ್, ಏರ್ ಲೈನ್ಸ್ ಇಲಾಖೆ ಅಧಿಕಾರಿಗಳು ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here