ಜೇವರ್ಗಿ : ಭಾರತ ದೇಶದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿ ಸ್ವತಂತ್ರಕ್ಕಾಗಿ ನಗುತ್ತಲೇ ಗಲ್ಲಿಗೇರಿದ ಅಪ್ಪಟ ದೇಶಪ್ರೇಮಿ ಹೋರಾಟಗಾರ ನಮ್ಮೆಲ್ಲರ ಮೆಚ್ಚಿನ ಕನ್ನಡನಾಡಿನ ಕ್ರಾಂತಿಯ ಕಿಡಿ ಎಂದು ಹೆಸರು ಪಡೆದಂತಹ ಸಂಗೊಳ್ಳಿ ರಾಯಣ್ಣನವರ ಚರಿತ್ರೆಯನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈ ಬಿಟ್ಟಿರುವುದು ಸರಿಯಲ್ಲ. ಇಂದು ಸ್ವತಂತ್ರ ಹೋರಾಟಗಾರರ ಹೆಸರು ಪಠ್ಯಕ್ರಮದಲ್ಲಿ ಉಳಿಸಲು ಮತ್ತೊಂದು ಸ್ವತಂತ್ರ ಹೋರಾಟ ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ಅಧ್ಯಕ್ಷರಾದ ನಿಂಗಣ್ಣ ರದ್ದೇವಾಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಇಲ್ಲಿನ ಮಾಳಿಂಗರಾಯ ದೇವಸ್ಥಾನದಿಂದ ಪ್ರಾರಂಭಿಸಿ ತಾಲೂಕು ಕಚೇರಿಯ ಮಿನಿವಿಧಾನಸೌಧದವರೆಗೂ ಸರಕಾರದ ವಿರುದ್ಧ ಕುರುಬ ಸಮಾಜದ ಮುಖಂಡರು ಸೇರಿದಂತೆ ಇತರ ಮುಖಂಡರು ಘೋಷಣೆಗಳನ್ನು ಕೂಗಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.
ಅಲ್ಲದೆ ಟಿಪ್ಪು ಸುಲ್ತಾನ ಹಾಗೂ ರಾಣಿ ಅಬ್ಬಕ್ಕದೇವಿ ಸೇರಿದಂತೆ ಪ್ರವಾದಿ ಮಹಮ್ಮದರ ವಿಷಯಗಳನ್ನು ಸಹ ಮರೆಮಾಚುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನೆಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಕನಕಗುರುಪೀಠದ ಗುರುಗಳಾದ ಬೀರಲಿಂಗ ದೇವರು ಸರಕಾರದ ತಾರತಮ್ಯ ಹಾಗೂ ಅವಿವೇಕದ ಕ್ರಮ ಇದಾಗಿದ್ದು ,ಇಂತಹ ವಿವೇಚನಾರಹಿತ ನಿರ್ಧಾರಗಳು ಸಮಾಜದ ಮುಖಂಡರು ಹಾಗೂ ಸಮುದಾಯಕ್ಕೆ ನೋವುಂಟುಮಾಡಿದವೆ. ಮುಖ್ಯಮಂತ್ರಿಗಳು ಈ ಕುರಿತಂತೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮರೆಪ್ಪ ಸರಡಗಿ ಸೇರಿದಂತೆ ಸಮಾಜದ ಮುಖಂಡರಾದ ಭಗವಂತರಾಯ ಅಂಕಲಗಾ, ಸಂತೋಷ್ ಬಗಲೂರು, ಸಮಾಧಾನ ಪೂಜಾರಿ, ಸಂಗಣಗೌಡ ಸರಡಗಿ, ರಾಜಶೇಖರ್ ಮುತ್ತು ಕೋಡ್, ಬಸವರಾಜ ಮದ್ರಕಿ, ಬಸವರಾಜ್ ಬಾಗೆವಾಡಿ, ಮಾಳಪ್ಪ ಅಪ್ಪಾಜಿ ಚಿಂಚೋಳಿ ,ರವೀಂದ್ರ ಗುತ್ತೇದಾರ್ ,ಪ್ರವೀಣ್ ಪೂಜಾರಿ ಕಾಳಗಿ, ಕನಕರಾಜ ಸೇಡಂ, ಮಲ್ಲಿಕಾರ್ಜುನ್ ಮಾವನೂರು ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.