ಸುರಪುರ: ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಗೆದ್ದಲಮರಿ ಗ್ರಾಮದ ಬಿಜೆಪಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಹುಸನಮ್ಮ ಭೀಮಪ್ಪ ಕಾಳೆ ಮತ್ತಿತರೆ ಕಾರ್ಯಕರ್ತರರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಲ್ಲರಿಗೂ ಶಾಲು ಹೊದಿಸಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಶಾಸಕರು ಮಾತನಾಡಿ,ತಾವೆಲ್ಲ ಕಾಂಗ್ರೇಸ್ ಪಕ್ಷದ ಕೆಲಸ ಕಾರ್ಯಗಳು ಮತ್ತು ತಾಲ್ಲುಕಿನಲ್ಲಿ ನಾನು ಶಾಸಕನಾಗಿದ್ದಾಗ ಮಾಡಿದ ಜನಪರ ಕೆಲಸಗಳ ಮೆಚ್ಚಿ ಪಕ್ಷ ಸೇರ್ಪಡೆಯಾಗಿದ್ದು ಸಂತೋಷ ತಂದಿದೆ,ತಾವೆಲ್ಲ ಕಾಂಗ್ರೇಸ್ ಪಕ್ಷದ ಬೆಳವಣಿಗೆಗೆ ಕೆಲಸ ಮಾಡುವಂತೆ ವಿನಂತಿಸಿದರು.
ಸೇರ್ಪಡೆಯಾದವರು, ತಿಪ್ಪಣ್ಣ ದೊಡ್ಡಮನಿ, ನಾಗಪ್ಪ, ಗದ್ದೇಮ್ಮ ಹಣಮಪ್ಪ ಕಾಳೆ, ದೇವಪ್ಪ ಕಾಳೆ, ಭೀಮಪ್ಪ ಕಾಳೆ, ಹಂಡಪ್ಪ ಸುಕಮುನಿ, ರಾಪೂಜಿ ಕಾಳೆ ಹಾಗೂ ಇನ್ನಿತರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೌಡಪ್ಪಗೌಡ ಬಾಕ್ಲಿ, ಶಾಂತಗೌಡ ಚನ್ನಪಟ್ಟಣ, ಬಸವವಂತ್ರಾಯ ಸಾಹುಕಾರ, ಬಾಬು ಸಾಹುಕಾರ, ಬಸವರಾಜ ಅಂಗಡಿ, ಗುಂಡಪ್ಪ ಸೋಲ್ಲಾಪೂರ, ಯಮನಪ್ಪ ದೊರಿ ರಾಜನಕೊಳ್ಳೂರು, ಸಿದ್ದಲಿಂಗಪ್ಪ ದೇಸಾಯಿ, ಹಣಮಗೌಡ ಬೈಲಕುಂಟಿ, ಹಲವಪ್ಪ, ಬಸಯ್ಯ ಸ್ವಾಮಿ ಗೇದ್ದಲಮರಿ, ಶಿವರಡ್ಡಿ ಬೀರೆದಾರ, ಯಂಕಪ್ಪ, ನಾಗರಾಜ, ಭೀಮಣ್ಣ ಮೂಲಿಮನಿ, ದುರಗೇಶ ಕನ್ನೇಳ್ಳಿ ರುದ್ರೇಶ ಕುಂಬಾರ, ಅಂಬ್ರಣ್ಣ ದೊಡ್ಡಮನಿ ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರರು ಇತರರು ಇದ್ದರು.