ಅಂಗನವಾಡಿಯಲ್ಲೆ ಪೂರ್ವ ಪ್ರಾಥಮಿಕ ಆರಂಭಿಸಲು ಸರಕಾರಕ್ಕೆ ಮನವಿ

0
191

ಸುರಪುರ: ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರತ್ಯೇಕವಾಗಿ ಆರಂಭಿಸುವ ಬದಲು ಅಂಗನವಾಡಿ ಶಾಲೆಗಳಲ್ಲಿಯೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವಂತೆ ತಾಲ್ಲುಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಸ್ಸಮ್ಮ ಆಲ್ಹಾಳ ಮಾತನಾಡಿದರು.

ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳಲ್ಲೆ ಆರಂಭಿಸುವಂತೆ ಸರಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿ,ಈಗಾಗಲೆ ಅಂಗನವಾಡಿಗಳಲ್ಲಿ ಮೂರುವರೆ ವರ್ಷದಿಂದ ಆರು ವರ್ಷದ ವರೆಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಅಕ್ಷರಭ್ಯಾಸಗಳನ್ನು ಮಾಡಿಸಲಾಗುತ್ತದೆ,ಇದೆಲ್ಲವು ಇರುವಾಗ ಸರಕಾರ ಪ್ರತ್ಯೇಕವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಮತ್ತು ಶಿಕ್ಷಕರ ನೇಮಿಸಿಕೊಳ್ಳುವ ಬದಲು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಮುಗಿಸಿದವರುಗಳಿದ್ದು ಅವರೆಲ್ಲರು ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಕಲಿಸಲು ಶಕ್ತರಾಗಿದ್ದಾರೆ.

Contact Your\'s Advertisement; 9902492681

ಇದನ್ನು ಮನಗಂಡಿರುವ ಕೇಂದ್ರ ಸರಕಾರವು ಕೂಡ ಅಂಗನವಾಡಿಗಳ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸುತ್ತದೆ,ಇಂತದರಲ್ಲಿ ಸರಕಾರಕ್ಕೆ ಒಂದೆ ವಿಷಯಕ್ಕೆ ಎರಡೆರಡು ಕಲಿಕಾ ಕೇಂದ್ರಗಳ ತೆರೆಯುವ ಬದಲು ಅಂಗನವಾಡಿ ಕೇಂದ್ರಗಳಲ್ಲೆ ಕಲಿಸಲು ಮುಂದಾಗಬೇಕೆಂದರು.

ಈ ವಿಷಯದ ಕುರಿತು ಸರಕಾರಕ್ಕೆ ಒತ್ತಾಯಿಸಲು ಇದೇ ತಿಂಗಳ ೩೦ನೇ ತಾರೀಖಿನಂದು ಬೆಂಗಳೂರಲ್ಲಿ ಅಂಗನವಾಡಿ ನೌಕರರು ಹೋರಾಟ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದು,ತಾಲ್ಲೂಕು ಮಟ್ಟದಿಂದಲೂ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿ,ಸರಕಾರಕ್ಕೆ ಬರೆದ ಮನವಿಯನ್ನು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುರೇಖಾ ಕುಲಕರ್ಣಿ,ಅಂಗನವಾಡಿ ನೌಕರರಾದ ಭೀಮಬಾಯಿ ನಾರಾಯಣಪೂರ,ಭಾಗಿರತಿ ಕೋಟೆಗುಡ್ಡ,ಜಗದೇವಿ ಅಗತೀರ್ಥ,ನರಸಮ್ಮ ಲಿಂಗದಹಳ್ಳಿ,ಜಮಿಲಾ ಅಗ್ನಿ,ನೂರಜಾ,ಸುಲೋಚನಾ,ಗುರುದೇವಿ ಹೆಬ್ಬಾಳ,ರಾಧಾಬಾಯಿ ಲಕ್ಷ್ಮೀಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here