ಜೇವರ್ಗಿ: ನನ್ನೆ ಪುರಸಭೆ ಕಾರ್ಯಾಲಯ ಜೇವರ್ಗಿ ಹಾಗೂ ತಾಲೂಕು ಆಡಳಿತ ವತಿಯಿಂದ ಜೇವರ್ಗಿ ಪಟ್ಟಣದಲ್ಲಿ ಕರೋನವೈರಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರೊನ ವೈರಸ್ ಕುರಿತು ಜಾಗೃತಿ ಗೀತೆಯನ್ನು ಬಿಸಿಎಂ ವಿಸ್ತರಣಾಧಿಕಾರಿಗಳಾದ ವಿರುಪಾಕ್ಷಪ್ಪ ಹಿರೇಗೌಡ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಸಿಲ್ದಾರ್ ಸಿದ್ದ ರಾಯ ಬೊಸಗಿ ಇಡೀ ರಾಷ್ಟ್ರದಾದ್ಯಂತ ಹಬ್ಬಿರುವ ಕೋವಿಡ್ 19ವೈರಸ್ ಹೊಡೆದೋಡಿಸಲು ಕಂಕಣಬದ್ಧರಾಗಬೇಕು. ಈ ವೈರಸ್ನ ಕುರಿತು ಸಾರ್ವಜನಿಕರು ಅತ್ಯಂತ ಎಚ್ಚರದಿಂದಿರಬೇಕು . ಸಮಾಜಿಕ ಅಂತರವನ್ನು ಕಾಯ್ದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳುವಳಿಕೆ ಮಾತುಗಳನ್ನು ಹೇಳಿದರು.
ಪುರಸಭೆ ಮುಖ್ಯ ಅಧಿಕಾರಿಗಳಾದ ಲಕ್ಷ್ಮೀಶ್ ಮಾತನಾಡಿ ಪಟ್ಟಣದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಸಾರ್ವಜನಿಕರು ಕಾಳಜಿ ವಹಿಸಬೇಕು, ಹಾಗೂ ಮಾಸ್ಕನ್ನು ಕಡ್ಡಾಯವಾಗಿ ಧರಿಸಿ ಹೊರಗಡೆ ಬರಬೇಕು ,ಅಲ್ಲದೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಈ ಕುರಿತು ಮುಖ್ಯ ರಸ್ತೆಯ ಮೇಲೆ ಕಾಲ್ನಡಿಗೆ ಜಾಥಾದ ಮೂಲಕ ಅರಿವು ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಾದ ಸಿದ್ದು ಪಾಟೀಲ್, ತಹಸೀಲ್ದಾರರಾದ ಸಿದ್ದರಾಯ ಬೊಸಗಿ, ಬಿಸಿಎಂ ವಿಸ್ತರಣಾಧಿಕಾರಿಗಳು ವಿರುಪಾಕ್ಷಪ್ಪ ಹಿರೇಗೌಡ ,ಪುರಸಭೆಯ ಮುಖ್ಯಾಧಿಕಾರಿಗಳು ಲಕ್ಷ್ಮೀಶ್ ಸಿಬ್ಬಂದಿಗಳಾದ ರಾಜ್ ಶೇಖರ್ ಹಿರೇಮಠ್, ವೀರಣ್ಣ ರಾಜನಾಳ, ರಾಜಶೇಖರ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.