ಶ್ರೀರಾಮ ಮಂದಿರ ಶಿಲನ್ಯಾಸ ಹಿನ್ನೆಲೆ ಅಮ್ಮಾಪುರದಲ್ಲಿ ಶ್ರೀರಾಮನಿಗೆ ಹಾಲಿನಭೀಷೇಕ

0
33

ಸುರಪುರ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ತಾಲೂಕಿನ ಪೇಠ ಅಮ್ಮಾಪುರದಲ್ಲಿ ಶ್ರೀರಾಮನ ಭಕ್ತರು ಅಧ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.

ಗ್ರಾಮದ ಬಸ್ ನಿಲ್ದಾಣ ಬಳಿಯಲ್ಲಿ ಸುಮಾರು ೨೦ ಅಡಿ ಎತ್ತರದ ಶ್ರೀರಾಮನ ಭಾವಚಿತ್ರಕ್ಕೆ ಹಾಲಿನ ಅಭೀಷೇಕ ಮಾಡಿ ಶಿಲಾನ್ಯಾಸಕ್ಕೆ ಶುಭ ಹಾರೈಸುವ ಜೊತೆಗೆ ಘೋಷಣೆಗಳನ್ನು ಕೂಗಿದರು.ನಂತರ ಹನುಮಾರ ಮಂದಿರ ಆವರಣದಲ್ಲಿ ಸೇರಿದ ರಾಮ ಭಕ್ತರನ್ನು ಉದ್ದೇಶಿಸಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನರಡ್ಡಿ ಮಾತನಾಡಿ, ಇಡೀ ಭಾರತೀಯರ ಐದು ಶತಮಾನಗಳ ಕನಸಿನ ರಾಮ ಮಂದಿರ ನಿರ್ಮಾಣಕ್ಕೆ ಇಂದು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ಶಿಲಾನ್ಯಾಸ ನೆರವೇರಿಸುತ್ತಿದ್ದಾರೆ.

Contact Your\'s Advertisement; 9902492681

ಇಂದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ದಾಖಲಿಸಬೇಕಾದ ದಿನವಾಗಿದೆ.ಈ ದಿನವನ್ನು ನಾವೆಲ್ಲರು ಬದುಕಿನುದ್ದಕ್ಕೂ ಸ್ಮರಿಸುವ ದಿನವಾಗಿದೆ.ಇಂದು ಶಿಲಾನ್ಯಾಸ ನೆರವೇರಿದಂತೆ ಇನ್ನು ಕೆಲವೇ ವರ್ಷಗಳಲ್ಲಿ ಶ್ರೀರಾಮನ ಮಂದಿರ ಲೋಕಾರ್ಪಣೆಯೂ ಮೋದಿಜಿಯವರಿಂದ ಆಗಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಖಾನೂಲಪ್ಪ ಮೂಕನೂರ,ನಿಂಗಪ್ಪಗೌಡ ಮಾಲಿ ಪಾಟೀಲ,ಚಿದಾನಂದ ಯಳವಾರ,ಬಸವರಾಜ ತನಕೇದಾರ,ಸುರೇಶ ಕಟ್ಟಿಮನಿ,ಮಂಜುನಾಥ ಮರಾಠ,ಅಂಬ್ರೇಶ ಶಹಬದಿ,ಪ್ರಕಾಶ ಸಮೇದ,ಅಯ್ಯಪ್ಪ ಯಾದವ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here