ಗುಲ್ಬರ್ಗಾ ವಿವಿಯ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಒಕ್ಕೂಟದಿಂದ ಒತ್ತಾಯ

0
73

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ಸಾಲಿನಲ್ಲಿ ಮತ್ತೆ ಹೊಸ ನಿಯಮಾವಳಿಯಲ್ಲಿ ಮೀಸಲಾತಿ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೆ ಕಾರ್ಯಭಾರವನ್ನು ಕಳಿಸಿಕೊಡಲು ಕುಲಸಚಿವರು ಆದೇಶ ಹೊರಡಿಸಿದ್ದು, ವಿವಿ ಅತಿಥಿ ಉಪನ್ಯಾಸಕರ ಒಕ್ಕೂಟದ ಖಂಡಿಸಿದೆ.

ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ರೋಸ್ಟರ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಆಯ್ಕೆ ಮಾಡಿಕೊಳ್ಳವ ಬಗ್ಗೆ ಅವಕಾಶ ನೀಡಿಲ್ಲ. ಗುಲ್ಬರ್ಗಾ ವಿವಿ ಅವೈಜ್ಞಾನಿಕ ನಿಯಮ ರೂಪಿಸಿರುವುದ ಖಂಡನೀಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಡಾ. ವಿದ್ಯಾಧರ್ ನಾಗನಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ನಿಯಮದಿಂದ ಅನಾನುಕೂಲಗಳು ಹೆಚ್ಚಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ  ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕೆಂದು ಕುಲಪತಿಗಳಿಗೆ ಭೇಟಿ ನೀಡಿ ಮನವಿ ಮಾಡಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷರಾದ ಡಾ. ಶಶಿಧರ ಮೇಳಕುಂದೆ, ಡಾ. ಶಿವುಕುಮಾರ ಸಂಗನ, ಡಾ. ವಿಜಯಕುಮಾರ ಬೀಳಗಿ, ಮತ್ತು ಡಾ. ಸುನೀಲ ಜಾಬಾದಿ,  ರಾಜು ಕಟ್ಟಿಮನಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here