ಸುರಪುರ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸುರಪುರ ತಾಲೂಕು ಅಧ್ಯಕ್ಷರನ್ನಾಗಿ ಶುಭಾಶ್ಚಂದ್ರ ಡಿ.ಬೊಮ್ಮನಹಳ್ಳಿಯವರನ್ನು ನೇಮಕಗೊಳಿಸಲಾಗಿದೆ.
ಈ ಕುರಿತು ಸಂಘಟನೆ ರಾಜ್ಯಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ಆದೇಶ ಹೊರಡಿಸಿದ್ದು,ಸುರಪುರ ತಾಲೂಕಿನಾದ್ಯಂತ ಯುವ ಘರ್ಜನೆ ಸಂಘಟನೆಯನ್ನು ಬಲ ಪಡಿಸುವ ಜೊತೆಗೆ ಕುರುಬ ಸಮುದಾಯದ ಏಳಿಗೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಾ,ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬಾರದಂತೆ ಸಂಘಟನೆಯನ್ನು ಬೆಳೆಸಿಕೊಂಡು ಹೋಗುವಂತೆ ಅವರು ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.