ಕಲಬುರಗಿ: ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್, ಸ೦ಗೊಳ್ಳಿರಾಯಣ್ಣ, ಪ್ರವಾದಿ ಮಹಮದ್ ಪೈಗಂಬರ್, ಏಸುಕ್ತಿಸ್ತ ಮೊದಲಾದವರಿಗೆ ಸಂಬಂಧಪಟ್ಟ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟ ಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಟೀಲ್ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿಕ್ಷಣ ಸಮಿತಿಯಿಂದ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಸರಕಾರ ಉದ್ಧೇಶಪೂರ್ವಕವಾಗಿ ಪಠ್ಯಗಳನ್ನು ಕೈ ಬಿಟ್ಟರುವದು ಗೋಚರಿಸುತ್ತದೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ರಾಜಕೀಯ ಲಾಭಕ್ಕಾಗಿ ಇತಿಹಾಸ ಮತ್ತು ಸಂವಿಧಾನವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ ಎಂದು ಸರಕಾರದ ವಿರುದ್ಧ ಕೀಡಿಕಾರಿದರು. ಕೈ ಬಿಟ್ಟ ವಿಷಯಗಳನ್ನು ಪುನಃ ಸೇರ್ಪಡೆ ಮಾಡದಿದ್ದರೆ ರಾಜ್ಯಾದ್ಯಂತ ಶಿಕ್ಷಣ ಇಲಾಖೆ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ನಾಗೀಂದ್ರಪ್ಪ ಪೂಜಾರಿ. ಧರ್ಮರಾಜ ಹೆರೂರ. ವಿಠ್ಠಲ ಪೂಜಾರಿ, ಕುಪೇಂದ್ರ ಬರಗಾಲಿ, , ಶಿವಲಿಂಗ ವಸ್ಗೆ, ಕಾಶಿನಾಥ ಮರತೂರ ಸೇರಿದಂತೆಇತರರಿದ್ದರು.