ಶಹಾಪುರ: ಯಾದಗಿರಿ ಜಿಲ್ಲಾದ್ಯಂತ ಕೋವಿಡ್-19 ಹಿನ್ನೆಯಲೆಯಲ್ಲಿ ವಠಾರ ಶಾಲೆಗಳು ಪ್ರಾರಂಭವಾಗಿದ್ದು, ಶಿರವಾಳದ ವಠಾರ ಶಾಲೆ ಅಂಬೇಡ್ಕರ್ ಕಾಲೋನಿಯ ವಠಾರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಿಕ್ಷಕರು ಪಾಠ ನಡೆಸುತ್ತಿರುವ ದೃಶ್ಯ ಕಂಡುಬಂತು.
ಮೇ ತಿಂಗಳ ಕೊನೆಯ ವಾರದಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಶಾಲೆಗಳನ್ನು ತೆರೆಯಲು ಅನುಮತಿ ಇಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಮಕ್ಕಳು ಇರುವ ಕಡೆಯೆ ತೆರಳಿ ಆಟ, ಪಾಠ ಮಾಡುವ ಮೂಲಕ ಶಾಲೆಯಿಂದ ಮಕ್ಕಳ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ವಠಾರ ಪಾಠ ಆರಂಭಿಸಲಾಗಿದೆ.
‘ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ ಕಲಿಕೆ ನಡೆಯುತ್ತಿದೆ. ವಿಶಾಲ ಅಂಗಳ, ದೇವಸ್ಥಾನ, ಜಗುಲಿ, ಶಾಲಾ ಕಾರಿಡಾರ್ ಸೇರಿದಂತೆ ಇನ್ನಿತರ ಕಡೆ ವಠಾರ ಪಾಠ ಶಾಲೆ ನಡೆಯುತ್ತಿದೆ ಎಂದು ಶಾಲೆಯ ಮುಖ್ಯ ಗುರುಗಳಾದ ನದಾಫ್ ತಿಳಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರ ಇದ್ದರು