ಕಲಬುರಗಿ: ವಿದ್ಯುತ್ ಬಿಲ್ ಗಳು ಕಳೆದ ನಾಲ್ಕು ತಿಂಗಳುಗಳಲ್ಲಿ ಎರಡು-ಮೂರು ಪಟ್ಟು ಹೆಚ್ಚು ಬಂದಿರುವ ಬಗ್ಗೆ ಆರೋಪಿಸಿ, ಕೋವಿಡ್-19 ಮತ್ತು ಲಾಕ್ ಡೌನ್ ಪ್ರಯುಕ್ತ ಬಿಲ್ ಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ್, ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಶಾಸಕಿ ಕನೀಜ್ ಫಾತೀಮಾ ಅವರಿಗೆ ಭೇಟಿ ನೀಡಿ ನಯಾ ಸವೇರಾ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ಮೋದಿನ ಪಟೇಲ್ ಅಣಬಿ ಮಾತನಾಡಿ, ವಿದ್ಯುತ್ ಬಿಲ್ ಯೂನಿಟ್ ಪಾಯಿಂಟ್ ಏರಿಕೆಯಾಗುತ್ತಿರುವ ಬಗ್ಗೆ ಸಂಘಟನೆ ಹಲವು ಬಾರಿ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ, ಆದರೂ ಸಹ ಸರಕಾರ ಮತ್ತು ವಿದ್ಯತ್ ಸರಬರಾಜು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಈ ಕುರಿತು ಕಲ್ಯಾಣ ಕರ್ನಾಟಕದ ಭಾಗದ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಒಂದು ವಾರದಲ್ಲಿ ಸಮಸ್ಯೆ ನಿವಾರಿಸದಿದ್ದಲ್ಲಿ ಶಾಸಕರ ಮನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಸಂಘಟನೆ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಚಿತಾಪುರ್, ಸೈಯದ್ ಏಜಾಜ್ ಅಲಿ ಇನಮ್ದಾರ್, ಸೈರಾ ಬಾನು ಅಬ್ದುಲ್ ವಾಹಿದ್, ಮಲ್ಲಿಕಾರ್ಜುನ್ ನೀಲೂರ್, ಖಾಲಿಕ್ ಅಹ್ಮದ್, ಮಕ್ಬುಲ್ ಅಹಮದ್ ಸಗರಿ, ಫಯಾಜ್ ಪಟೇಲ್, ಗೀತ ಮುದ್ಗಲ್, ರಾಬಿಯಾ ಶಿಕಾರಿ, ರಾಫಿಯ ಸೀರಿನ್, ಫೌಜಿಯಬೇಗಂ,ಪರ್ವೀನ್ ಬೇಗಂ, ಮುಮ್ತಾಜ್ ಬೇಗಂ, ಸಲ್ಮಾನ್ ಪಟೇಲ್, ಬಾಬಾ ಫಕ್ರುದ್ದಿನ್ ಅನ್ಸಾರಿ, ಜಿಲಾನ್ ಗುತ್ತೇದಾರ್, ಮಹಿಬೂಬ್ ಖಾನ್, ಮುಬೀನ್ ಅನ್ಸಾರಿ, ಯುನುಸ್ ಪಟೇಲ್, ತಜಮ್ಮಲ್, ಬಾಬು ಮಿಯಾ, ಇಜಾಜ್ ನಿಂಬಾಳ್ಕರ್, ಸೈಯದ್ ಹುಸೇನ್, ಮೊಹಮ್ಮದ್ ವಸೀಮ್, ಮೊಹಮ್ಮದ್ ನಸೀರ್, ಅಜಿಮ್, ಹುಸೇನ್ ಸೇರಿದಂತೆ ಇತರರು ಹಾಜರಿದ್ದರು.