ಸುರಪುರ: ೧೮.೫೦ ಕೋಟಿಯ ೧೧ ಕಾಮಗಾರಿಗಳಿಗೆ ಏಕಕಾಲದಲ್ಲಿ ಚಾಲನೆ

0
61

ಸುರಪುರ: ಹಿಂದೆಯೆ ಕನಕ ಭವನ ಕಾಮಗಾರಿ೨೫ ಲಕ್ಷ ಅನುದಾನ ಮಂಜೂರು ಮಾಡಲಾಗಿತ್ತು ಈಗ ೫೦ ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಒಟ್ಟು ೭೫ ಲಕ್ಷದಲ್ಲಿ ಭವನದ ಕಾಮಗಾರಿ ನಡೆಯಲಿದೆ ಎಂದು ಶಾಸಕ ರಾಜುಗೌಡ ಹೇಳಿದರು.

ನಗರದ ಕುಂಬಾರಪೇಟ ಬಡಾವಣೆಯಲ್ಲಿ ಆಯೋಜಿಸಿದ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಹುದಿನಗಳ ಬೇಡಿಕೆಯಾಗಿದ್ದ ಕನಕ ಭವನ ಸೇರಿ ಇನ್ನಿತರ ಕಾಮಗಾರಿಗಳು ಪ್ರಾರಂಭವಾಗಬೇಕಾಗಿತ್ತು ಈ ಕರೊನಾ ವೈರಸ್ ಮತ್ತು ಇನ್ನಿತರ ಕಾರಣಗಳಿಂಧಾಗಿ ಕಾಮಗಾರಿ ಪ್ರಾರಂಭ ಸ್ವಲ್ಪ ತಡವಾಗಿದೆ ಈನ್ನು ಈ ಕಾಮಗಾರಿಗಳು ಉತ್ತಮ ಗುಣಮಟ್ಟವೊಳ್ಳ ವಸ್ತಗಳನ್ನು ಬಳಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Contact Your\'s Advertisement; 9902492681

ನಗರಕ್ಕೆ ಕುಡಿಯುವ ನೀರಿನ ತೊಂದರೆ ನೀಗಿಸಲು ಕುಡಿಯುವ ನೀರಿನ ಕಾಮಗಾರಿಗೆ ೯ ಕೋಟಿ ವೆಚ್ಚದಲ್ಲಿ ನೀರುಶುದ್ಧಿಕರಣ ಘಟಕದೊಂದಿಗೆ ಕಾಮಗಾರಿ ಸೇರಿದಂತೆ ಪಶುವೈದ್ಯ ಪಶುವೈದ್ಯ ಆಸ್ಪತ್ರೆ ಕಟ್ಟಡಕ್ಕೆ ೪೨ ಲಕ್ಷ ಇಂದ ವರ್ಗಗಳ ತಾಂತ್ರಿಕ ಕಾಲೇಜು ಬಾಲಕಿಯರ ವಸತಿ ನಿಲಯಕ್ಕೆ ೩ ಕೋಟಿ ೨೪ ಲಕ್ಷ, ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಕುಡಿಯುವ ನೀರು ಹಾಗೂ ಚರಂಡಿ ಕಾಮಗಾರಿಗೆ ೨ ಕೋಟಿ ೭೧ ಲಕ್ಷ ಮತ್ತು ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ೩ ಕೋಟಿ ಸೇರಿದಂತೆ ಒಟ್ಟು ೧೮ ಕೋಟಿ ೫೦ ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿ ನಿರ್ಮಿಸಲಾಗುವುದು ಕಾಮಗಾರಿಯು ಕಳಪೆ ಗುಣಮಟ್ಟ ನಿರ್ಮಿಸುವುದು ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಅಧ್ಯಕ್ಷ ಬಸನಗೌಡ ಯಡಿಯಾಪುರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನಮಪ್ಪನಾಯಕ (ತಾತ), ಯಲ್ಲಪ್ಪ ಕುರಕುಂದಿ, ಎಪಿಎಂಸಿ ಉಪಾಧ್ಯಕ್ಷ ದುರ್ಗಪ್ಪ ಗೋಗಿಕೆರ, ನಗರಸಭೆ ಸದಸ್ಯರಾದ ವೇಣು ಮಾಧವ ನಾಯಕ ನರಸಿಂಹಕಾಂತ ಪಂಚಮಗಿರಿ ಮಹೇಶ ಪಾಟೀಲ್ ಶಿವುಕುಮಾರ ಕಟ್ಟಿಮನಿ ತಾಲೂಕು ಪಂಚಾಯಿತಿ ಸದಸ್ಯ ದೊಡ್ಡ ಕೊತಲೆಪ್ಪ ಹಾವಿನ್ ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಭೀಮಣ್ಣ ಮಾಸ್ತರ ಮುಖಂಡರಾದ ಅಮರಣ್ಣ ಹುಡೇದ ಹೆಚ್.ಸಿ.ಪಾಟೀಲ ಅಯ್ಯಪ್ಪ ಅಕ್ಕಿ ರಂಗನಗೌಡ ಪಾಟೀಲ್, ಕೃಷ್ಣಾ ಹಾವಿನ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here