ಶಹಾಬಾದ: ಶಾಲಾ ಪಠ್ಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ರಾಣಿ ಅಬ್ಬಕ್ಕ, ಟಿಪ್ಪು ಸುಲ್ತಾನ್, ಪ್ರವಾದಿ ಮಹಮದ್ ಪೈಗಂಬರ್, ಏಸುಕ್ತಿಸ್ತ ಮೊದಲಾದವರಿಗೆ ಸಂಬಂಧಪಟ್ಟ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಶಿಕ್ಷಣ ಸಮಿತಿಯಿಂದ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಸರಕಾರ ಉದ್ಧೇಶಪೂರ್ವಕವಾಗಿ ಪಠ್ಯಗಳನ್ನು ಕೈ ಬಿಟ್ಟರುವದು ಗೋಚರಿಸುತ್ತದೆ.ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಅವರು ಯಾವುದೇ ಜಾತಿ ವರ್ಗಕ್ಕೆ ಸೇರಿದವರಲ್ಲ. ರಾಜಕೀಯ ಲಾಭಕ್ಕಾಗಿ ಇತಿಹಾಸ ಮತ್ತು ಸಂವಿಧಾನವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ.ಮಹಾನ್ ಪುರುಷರ ಇತಿಹಾಸವನ್ನು ಕೈ ಬಿಟ್ಟ ವಿಷಯಗಳನ್ನು ಪುನಃ ಸೇರ್ಪಡೆ ಮಾಡದಿದ್ದರೆ ರಾಜ್ಯಾದ್ಯಂತ ಶಿಕ್ಷಣ ಇಲಾಖೆ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿ, ತಹಸೀಲ್ದಾರ ಸುರೇಶ ವರ್ಮಾ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಮರಲಿಂಗ ಕಮರಡಗಿ, ಬಸವರಾಜ ಮದ್ರಕಿ, ಸಿದ್ದಲಿಂಗ ಮರತೂರ,ಶಾಂತಪ್ಪ ಪೂಜಾರಿ,ನಿಂಗಣ್ಣ ಹೂಗೊಂಡ,ಮಲ್ಲಿಕಾರ್ಜುನ್ ಪಟ್ಟಣಕರ್,ಮಲ್ಲಿಕಾರ್ಜುನ್ ನರಿಬೋಳ, ಶಿವಯೋಗಿ ಕುಂಟನ್,ದೊಡ್ಡಪ್ಪ ಹೊಸಮನಿ, ಶಿವಾನಂದ ಪೂಜಾರಿ, ನಾಗೇಂದ್ರ ಕಂಠಿ, ಅಶೋಕ ದೇವರಮನಿ,ಮಂಜುನಾಥ ದೊಡ್ಡಮನಿ, ಸುರೇಶ ಗಿರಣಿ, ಸುನೀಲ ಪೂಜಾರಿ ಇತರರು ಇದ್ದರು.