ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಸುರೇಶ ವರ್ಮಾ

0
42

ಶಹಾಬಾದ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ ಭಾರತ್ ಹಾಗೂ ಕರ್ನಾಟಕ ಆರೋಗ್ಯ ಯೋಜನೆಯ ಒಳಗೊಂಡ ಆರೋಗ್ಯ ಕಾರ್ಡಗಳ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದರು.

ಅವರು ಗುರುವಾರ ನಗರದ ಜಿಇ ಕಾಲೋನಿಯಲ್ಲಿ ಹೆಲ್ತ್ ಕಾರ್ಡ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಎಲ್ಲಾ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಜಾರಿಗೊಂಡ ಯೋಜನೆ ಇದಾಗಿದ್ದು,ಆ ದೃಷ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯುಷ್ಮಾನ ಕಾರ್ಡ ನೀಡಬೇಕು. ಪಡೆಯುವ ಸಾರ್ವಜನಿಕರು ಆಯಾ ಕೇಂದ್ರಗಳಲ್ಲಿ ಹೋಗುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಕೊಂಡೆ ಆಧಾರ ಕಾರ್ಡ ತೆಗೆದುಕೊಂಡು ಹೋಗಬೇಕು.ಈ ಕಾರ್ಡ ಪಡೆದ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಹಾಗೂ ಎಪಿಎಲ್ ಕಾರ್ಡದಾರರ ಕುಟುಂಬಗಳಿಗೆ 1.50 ಲಕ್ಷ ರೂ. ಉಚಿತ ಚಿಕಿತ್ಸೆ ದೊರೆಯಲಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಹೆಲ್ತ್ ಕಾರ್ಡ ವಿತರಣಾ ಕೇಂದ್ರದ ಸಂಜಯ್ ಠಾಣೆದಾರ, ಬಸವರಾಜ ಪೂಜಾರಿ, ತಿಮ್ಮಾರೆಡ್ಡಿ ಚೆಲುವಾದಿ,ರಮೇಶ ಚಡ್ರಿಕಿ, ದೇವೆಂದ್ರ ಗಾಯಕವಾಡ, ಶಿವಶರಣಪ್ಪ ಜೆಟ್ಟೂರ್, ರಾಮಲಿಂಗ ಮಾಕಾ,ಭೀಮಾಶಂಕರ ದಂಡೋತಿ, ಸೋಮಶೇಖರ ಉಳ್ಳಾಗಡ್ಡಿ, ರಾಮಕುಮಾರ ಸಿಂಘೆ, ಮಹಾಂತೇಶ ವಾಡಿ,ಶಿವಶರಣಪ್ಪ ಜೆಟ್ಟೂರ್ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here