ಕಲಬುರಗಿ: ರೈತ ದೇಶದ ಆಹಾರ ನೀಡುವ ನಿಜವಾದ ದೇವರು ಎಂದು ಅಲ್ಲಮಪ್ರಭು ಪಾಟೀಲ ಹೇಳಿದರು.
ಪಕ್ಷ ಸಂಘಟನೆಯಲ್ಲಿ, ಪಕ್ಷ ಅಧಿಕಾರಕ್ಕೆ ಬರಲು ರೈತರು, ಕೃಷಿಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಕಿಸಾನ್ ಕಾಂಗ್ರೆಸ್ ಘಟಕ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದರ್ ಜಿಲ್ಲೆಯ ಕಿಸಾನ್ ಘಟಕದ ವೀಕ್ಷಕರಾಗಿ ಷಣ್ಮುಖಪ್ಪ ಪಸರ್ಗಿ ಭಾಗವಹಿಸಿದ್ದರು.
ಕಿಸಾನ್ ಘಟಕ ಅಧ್ಯಕ್ಷರಾದ ವೀರಣ್ಣಗೌಡ ಮಲ್ಲಾಬಾದಿ ಅವರು ಘಟದ ನಿಯಮಗಳು ಮತ್ತು ರೈತ ಸಮಸ್ಯೆ, ಹೋರಾಟ, ಪಕ್ಷದ ಸಂಘಟನೆ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಸೇವಾಧಳದ ಹಣಮಂತ ನಿಂಬರ್ಗಾ ಭಾಗವಹಿಸಿದ್ದರು. ಎಲ್ಲಾ ಕ್ಷೇತ್ರದ ಮತ್ತು ತಾಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಸಭೆಯಲ್ಲಿ ಇದ್ದರು. ಮಹಾಲಕ್ಷ್ಮಿ ಜೇವರ್ಗಿ, ಶರಣಗೌಡ ಬಿರಾದಾರ, ಸಂಗನಗೌಡ ಪಾಟೀಲ, ಸಂತೋಷ ಹೊಸಳ್ಳಿ, ಸಾಯಬಣ್ಣ ಕೂಟನೂರ, ಭೀಮಾಶಂಕರ ಜನಿವಾರ, ಅನ್ವರ ಪಟೇಲ್, ರವೀಂದ್ರ ಪಾಟೀಲ್, ದಯಾನಂದ ಪಾಟೀಲ್, ಸಿದ್ದಣ್ಣ ಪೂಜಾರಿ, ಮಾಹಾಲ್ಯ ಕೊಬ್ಬಿನ, ಇನ್ನೂ ಇತರರು ಉಪಸ್ಥಿತರಿದ್ದರು.