ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಹಾಲು ಮತ ಸಮಾಜ ಹಾರೈಕೆ

0
47

ಸುರಪುರ: ಕೊರೊನಾ ಸೊಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಲೆಂದು ಸುರಪುರ ತಾಲೂಕು ಹಾಲುಮತ ಸಮಾಜ ಹಾರೈಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಾಲುಮತ ಸಮಾಜದ ಮುಖಂಡ ರವಿಚಂದ್ರ ಹುದ್ದಾರ ಆಲ್ದಾಳ ಪತ್ರಿಕಾ ಹೇಳಿಕೆ ನೀಡಿದ್ದು,ರಾಜ್ಯದ ಜನತೆಯ ಅಭಿವೃಧ್ಧಿಗಾಗಿ ಹಲವಾಅರು ಕೊಡುಗೆಗಳನ್ನು ನೀಡಿರುವ ಮಾನ್ಯ ಸಿದ್ದರಾಮಯ್ಯನವರು ಕೊರೊನಾ ಸೊಂಕು ತಗುಲಿರುವುದು ದುಃಖದ ಸಂಗತಿಯಾಗಿದೆ. ಅವರು ಶೀಘ್ರವೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮತ್ತೆ ಜನ ಸೇವೆಯಲ್ಲಿ ತೊಡಗುವಂತಾಗಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here