ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಶ್ಯ ಜಾತಿಗಳನ್ನು ತೆಗೆಯುವಂತೆ ಹೋರಾಟ ಅಗತ್ಯ: ತೇಗಲತಿಪ್ಪಿ

0
100

ಶಹಾಬಾದ: ಸ್ಪರ್ಶ್ಯ ಜಾತಿಗಳಾದ ಲಂಬಾಣಿ,ಭೋವಿ ವಡ್ಡರ್, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ತೆಗೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಅಗತ್ಯ ಎಂದಿಗಿಂತಲೂ ಇಂದು ಅವಶ್ಯವಾಗಿದೆ ಎಂದು ಅಸ್ಪೃಶ್ಯ ಸಮುದಾಯಗಳ ಮಹಾಸಭಾದ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ ಹೇಳಿದರು.

ಅವರು ಶನಿವಾರ ನಗರದ ಪಾರ್ವತಿ ಸಭಾಂಗಣದಲ್ಲಿ ಆಯೋಜಿಸಲಾದ ಪರಿಶಿಷ್ಟ ಜಾತಿ ಸಮುದಾಯಗಳ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಅಸ್ಪೃಶ್ಯ ಜಾತಿಗಳಾದ ಪರಿಶಿಷ್ಟ ಜಾತಿ(ಹೊಲೆಯ) ಮತ್ತು ಮಾದಿಗರಿಗೆ ಮಾತ್ರ ಮೀಸಲಾತಿಯನ್ನು ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯ ಕರ್ನಾಟಕ ಸರ್ಕಾರಕ್ಕೆ   ಆದೇಶ ನೀಡಿದೆ.ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಪರಿಶಿಷ್ಟ ಜಾತಿಗಳಾದ ಹೊಲೆಯ,ಮಾದಿಗ, ಸಮಗಾರ, ಡೋಹರ ಸಮಾಜದ ಬಂಧುಗಳಿಗೆ ಸಿಗಬೇಕಾದ ಮೀಸಲಾತಿಯ ಸವಲತ್ತುಗಳು ಸಿಗಬೇಕಾದರೆ ನಾವೆಲ್ಲರೂ ಒಂದಗೂಡಿ ಹೋರಾಟ ಮಾಡುವ ಅಗತ್ಯತೆಯಿದೆ ಎಂದು ಹೇಳಿದರು.

ಹಣಮಂತ ಭೋಧನಕರ್ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಸ್ಪಶ್ರ್ಯ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಟ್ಟು, ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸಬೇಕಿದೆ.ಅಲ್ಲದೇ ಸರ್ವೋಚ್ಛ ನ್ಯಾಲಯದ ಆದೇಶವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.

ಪರಮೇಶ್ವರ ಖಾನಾಪುರೆ,ಶ್ಯಾಮ ನಾಟೇಕಾರ,ಮಲ್ಲೇಶಿ ಸಜ್ಜನ್, ದಶರಥ ಓಣಿ,ಸುರೇಶ ಮೆಂಗನ್,ರಾಜೇಶ ಹೊನಗುಂಟಿಕರ್, ಗಿರೀಶ ಕಂಬಾನೂರ,ಶಿವರಾಜ ಕೋರೆ,ನಾಗರಾಜ ಸಿಂಘೆ,ಶರಣಬಸಪ್ಪ ಪಗಲಾಪೂರ,ದೇವೆಂದ್ರ ಗಾಯಕವಾಡ,ಬಸವರಾಜ ಮಯೂರ,ಪ್ರವೀಣ ರಾಜನ್,ನರೇಶ ಕಟಕೆ,ಕಾಶಿರಾಯ ನಂದೂರಕರ್,ಮಲ್ಲಿಕಾರ್ಜುನ್ ಗಾಜರೆ,ಬಸಣ್ಣ ಸಿಂಗೆ,ಸುರೇಶ ಹಾದಿಮನಿ,ವಿಶಾಲ ದರ್ಗಿ,ದಿನೇಶ ದೊಡ್ಡಮನಿ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here