ಬಿಜೆಪಿ ನಾಯಕರ ತೇಜೋವಧೆಯಿಂದ ನೊಂದಿದ್ದೇನೆ: ದೊರೆಸ್ವಾಮಿ

0
30

ಬೆಂಗಳೂರು: ನನ್ನ ಪ್ರಮಾಣಿಕ‌ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಮಾಡಿರುವ ತೇಜೋವಧೆಯಿಂದ ಕಳೆದ ಆರು ತಿಂಗಳಿಂದ ಸಾಕಷ್ಟು ನೊಂದಿದ್ದೇನೆಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್‌ದಿಂದ ಗೌರವ ಸ್ವೀಕರಿಸಿ ಮಾತನಾಡಿ ನನ್ನ ಇಡೀ ಬದುಕನ್ನು ಸಮಾಜಕ್ಕೆ ಮೀಸಲಿಟ್ಟ ಪರಿಣಾಮ ಬಿಜೆಪಿ ನಾಯಕರಿಂದ ತೇಜೋವಧೆ ಮಾತುಗಳನ್ನು ಕೇಳಬೇಕಾಗಿ ಬಂತು. ನನ್ನ ಪ್ರಮಾಣಿಕ ಹೋರಾಟಗಳು ಅವರ ಅರಿವಿಗೆ ಬಂದೇ ಇಲ್ಲವೇ. ಗೊತ್ತಿದ್ದು, ಜನರನ್ನು ದಾರಿ ತಪ್ಪಿಸಲು ಉದ್ದೇಶ ಪೂರ್ವಕವಾಗಿ ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here